ಸತತ 2ನೇ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರೆದಿದೆ. ಮನೆಯ ಸದಸ್ಯರನ್ನ ಹೊರಗೆ ಬಿಡದೆ ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಈ ಮಧ್ಯೆ, ಲಾಕರ್ ತೆಗೆಯಲು ಡಿಕೆಶಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ನಕಲಿ ಕೀ ಮಾಡುವವರನ್ನ ಐಟಿ ಅಧಿಕಾರಿಗಳು ಕರೆ ತಂದಿದ್ದಾರೆ ಎಂದು ವರದಿಯಾಗಿದೆ.
5 ಲಾಕರ್`ಗಳಲ್ಲಿ ಕೇವಲ 2 ಲಾಕರ್`ಗಳನ್ನ ಓಪನ್ ಮಾಡಿದ್ದು, ಉಳಿದ 3 ಲಾಕರ್`ಗಳನ್ನ ತೆರೆಯಲು ನಕಲಿ ಕೀ ಮಾಡುವವರನ್ನ ಕರೆ ತಂದಿದ್ದಾರೆ ಎನ್ನಲಾಗಿದೆ ವಶಪಡಿಸಿಕೊಂಡ ಹಣ, ಒಡವೆ, ದಾಖಲೆ ಪತ್ರಗಳ ಪಟ್ಟಿ ಅಂತಿಮಗೊಳಿಸಲಾಗಿಲ್ಲ ಎಂದು ಐಟಿ ಮೂಲಗಳು ಮಾಹಿತಿ ನೀಡಿವೆ.ದಾಳಿಯಲ್ಲಿ ಹಳೆಯ 500, 1000 ರೂ. ನೋಟುಗಳೂ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಈ ಮಧ್ಯೆ, ಡಿಕೆಶಿ ಸಂಬಂಧಿಕರ ಮನೆ ಮೇಲೂ ದಾಳಿ ಮುಂದುವರೆಸಿದ್ದು,ಮೈಸೂರಿನಲ್ಲಿರುವ ಡಿಕೆಶಿ ಮಾವನ ಮನೆಯಲ್ಲೂ ಐಟಿ ಅಧಿಕಾರಿಗಳ ತನಿಖೆ ಮುಂದುವರೆದಿದೆ. ಹಿರಿಯ ಅಧಿಕಾರಿಗಳು ದಾಖಲೆ ಪತ್ರಗಳನ್ನ ಪಟ್ಟಿ ಮಾಡುತ್ತಿದ್ದಾರೆ. ಇತ್ತ, ಜಯೋತಿಷಿ ದ್ವಾರಕಾನಾಥ್ ನಿವಾಸದಲ್ಲೂ ಪರಿಶೀಲನೆ ಮುಂದುವರೆದಿದ್ದು, ಕುಟುಂಬ ಸದಸ್ಯರು ಕೆಲಸಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ ಎಂದುತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ