ಇಬ್ಬರು ಭ್ರಷ್ಟ ಅಧಿಕಾರಿಗಳು ಮತ್ತು ಇಬ್ಬರು ಗುತ್ತಿಗೆದಾರರು 152 ಕೋಟಿ ರೂ. ಅಕ್ರಮ ಸಂಪತ್ತು ಹೊಂದಿರುವುದು ಬಹಿರಂಗವಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
ಕೋಟಿ ಕೋಟಿ ಹಣ, ಚಿನ್ನದ ಗಟ್ಟಿ, ಬೇನಾಮಿ ಆಸ್ತಿ ಸೇರಿದಂತೆ ಒಟ್ಟು 152 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಗುತ್ತಿಗೆದಾರರ ಮನೆಯ ಮೇಲೆ ದಾಳಿ ಮಾಡಿದಾಗ 6 ಕೋಟಿಗೂ ಹೆಚ್ಚು ನಗದು ಹಣ, 14 ಕೆಜಿ ಚಿನ್ನ, 40 ಕೋಟಿ ಮೌಲ್ಯದ ಕಾರುಗಳು ಪತ್ತೆಯಾಗಿದ್ದವು.
ಮನೆಯಲ್ಲಿದ್ದ ದಾಖಲೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ನಾಲ್ವರು ಭ್ರಷ್ಟ ತಿಮಿಂಗಿಲುಗಳು 152 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿರುವುದು ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾರೆ.
ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿರುವ ಬ್ಯಾಂಕ್‌ನಿಂದ 2000 ಮುಖಬೆಲೆಯ 4.7 ಕೋಟಿ ರೂಪಾಯಿ ನಗದು ಹಣವನ್ನು ಡ್ರಾ ಮಾಡಲಾಗಿತ್ತು ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.