ಬೆಂಗಳೂರು: ಇದು ಪರಿವರ್ತನಾ ಯಾತ್ರೆ ಅಲ್ಲ, ಇದು ಪಶ್ಚಾತ್ತಾಪ ಯಾತ್ರೆ ಎಂದು ಬದಲಾಯಿಸಿಕೊಳ್ಳಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, 2008ರಲ್ಲಿ ಜನ ಅಧಿಕಾರ ಕೊಟ್ರು. ಆದ್ರೆ 3 ಜನ ಮುಖ್ಯಮಂತ್ರಿಗಳು ಬಂದು ಹೋದ್ರು. ಹಗರಣಗಳ ಮೇಲೆ ಹಗರಣ ಮಾಡಿದ್ರು. ಗಣಿ ಹಗರಣ ಮೆತ್ತುಕೊಂಡು ಜನರಿಗೆ ಅನ್ಯಾಯ ಮಾಡಿದ್ರು. ಹೀಗಾಗಿ ಬಿಜೆಪಿಯವರು ಮೊದಲು ಪಶ್ಚಾತ್ತಾಪ ಯಾತ್ರೆ ಮಾಡಿಕೊಂಡು ಜನರ ಕ್ಷಮೆ ಕೇಳಲಿ. ಬಿಜೆಪಿಯವರಿಗೆ ಕ್ಷಮೆ ಇಲ್ಲ ಎಂದರು.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದು ಮಾಡ್ತೀವಿ, ಇದು ಮಾಡ್ತೀವಿ ಅಂದ್ರು. ಆದ್ರೆ ಏನು ಮಾಡಿಲ್ಲ. ಬರ ಸಂದರ್ಭದಲ್ಲಿ ಸರಿಯಾಗಿ ಕೇಂದ್ರ ಅನುದಾನ ನೀಡಿಲ್ಲ. ಬಿಜೆಪಿ ನಾಯಕರಿಗೆ ಅದನ್ನ ಕೇಳುವ ಧೈರ್ಯವಿಲ್ಲ. ರಾಜ್ಯದ ಜನ ಇವರನ್ನ ಕ್ಷಮಿಸುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ಗೃಹಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.
ಬೈಕ್ ರ‍್ಯಾಲಿ ಮಾಡುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಕಾನೂನು ಸುವ್ಯವಸ್ಥೆ ಹದೆಗೆಡಿಸಿದ್ರೆ ಯಾರೇ ಆದ್ರು ಕ್ರಮ ತೆಗೆದುಕೊಳ್ತೀವಿ. ಏನಾದ್ರು ಅವಘಡಗಳು ಆದ್ರೆ ಅದಕ್ಕೆ ಬಿಜೆಪಿಯವರೇ ಹೊಣೆ. ಅಂತಹವರ ಮೇಲೆ ಮೂಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.