Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನವೆಂಬರ್ 1 ರಿಂದ ನಾಮಫಲಕ ಕನ್ನಡದಲ್ಲಿರುವುದು ಕಡ್ಡಾಯ

ನವೆಂಬರ್ 1 ರಿಂದ  ನಾಮಫಲಕ ಕನ್ನಡದಲ್ಲಿರುವುದು ಕಡ್ಡಾಯ
ಬೆಂಗಳೂರು , ಭಾನುವಾರ, 20 ಅಕ್ಟೋಬರ್ 2019 (08:53 IST)
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಮುಂಗಟ್ಟುಗಳು ಸೇರಿದಂತೆ ಕಂಪೆನಿಗಳ ನಾಮಫಲಕ ನವಂಬರ್ 1 ರಿಂದ  ಕನ್ನಡದಲ್ಲಿರುವುದು ಕಡ್ಡಾಯವೆಂದು ಸೂಚಿಸಲಾಗಿದೆ.




ಹೌದು ಈ ಬಗ್ಗೆ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳು ಸೇರಿದಂತೆ ಕಂಪೆನಿಗಳ ನಾಮಫಲಕ ನವಂಬರ್ 1 ರಿಂದ  ಶೇ.60ರಷ್ಟು ಕನ್ನಡದಲ್ಲಿರುವುದು ಕಡ್ಡಾಯವಾಗಿದೆ. ಉಳಿದ ಪ್ರಮಾಣದಲ್ಲಿ ಯಾವುದೇ ಭಾಷೆಯನ್ನು ಬಳಕೆ ಮಾಡಬಹುದು. ಒಂದು ವೇಳೆ ಈ ಆದೇಶ ಪಾಲಿಸದಿದ್ದರೆ ಟ್ರೇಡ್ ಲೈಸೆನ್ಸ್ ರದ್ದುಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


ಕನ್ನಡದಲ್ಲಿ ನಾಮಫಲಿಕ ಕಡ್ಡಾಯವೆಂದು ಈ ಹಿಂದೆಯೇ ಆದೇಶಿಸಲಾಗಿತ್ತು. ಆದರೆ ಈ ಬಾರೀ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಾಗೇ ಹೊಸದಾಗಿ ಪರವಾನಗಿ ಅರ್ಜಿ ಸಲ್ಲಿಸುವವರು ಕೂಡ ಕನ್ನಡ ಭಾಷೆ ನಾಮಫಲಕ ಬಳಕೆ ಮಾಡುವುದು ಕಡ್ಡಾಯ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಆರ್ಥಿಕ ಸುಧಾರಣೆಗೆ ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ನೀಡಿದ ಸಲಹೆ ಏನು ಗೊತ್ತಾ?