ಕಾAಗ್ರೆಸ್‌ನಲ್ಲಿ ಎರಡುವರೇ ವರ್ಷದ ನಂತರ ಯಾರು ಸಿಎಂ ಆಗಬೇಕು ಎನ್ನುವ ಚರ್ಚೆ ಹಲವು ಬಾರಿ ಕೇಳಿ ಬಂದಿದೆ. ಡೆಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನೇತೃತ್ವದಲ್ಲಿ ಈಗಾಗಲೇ ಅಧಿಕಾರ ಹಂಚಿಕೆ ಸೂತ್ರದಡಿಯಲ್ಲಿ, ಒಪ್ಪಂದವಾಗಿದೆ ಅನ್ನುವ ಮಾತುಗಳು ಕೂಡ ಜೋರಾಗಿಯೇ ಸದ್ದು ಮಾಡಿದ್ದಿದೆ.
ಹಾಗೇನಾದರೂ ೫೦:೫೦ ಅಧಿಕಾರ ಹಂಚಿಕೆ ಸೂತ್ರದಡಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಮ್ಮುಖದಲ್ಲೇ ಇಂತಹದೊAದು ಚರ್ಚೆ, ಮಾತುಕತೆ ಆಗಿರೋದು ನಿಜವೇ ಆಗಿದ್ದರೇ, ಎರಡುವರೇ ವರ್ಷದ ಬಳಿಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಅನ್ನೋದು ಮಾನದಂಡವಾಗುತ್ತೆ. ಆ ನಂತರ ಸಿಎಂ ಸ್ಥಾನ ಡಿಕೆಶಿಗೆ ಒಲಿಯುತ್ತೆ ಕೂಡ.
ಆದರೆ ಅಧಿಕಾರ ಹಂಚಿಕೆಯ ಸೂತ್ರದ ಕುರಿತು ಅಂತಹದೊAದು ಚರ್ಚೆ, ಆಗದೇ ಹೋಗಿದ್ದಲ್ಲಿ, ಐದು ವರ್ಷಗಳ ಅವಧಿಗೂ ಸಿಎಂ ಆಗಿ ಸಿದ್ದರಾಮಯ್ಯನವರೇ ಕಂಟಿನ್ಯೂ ಆಗೋದು ಬಹುತೇಕ ನಿಕಿ ಆಗಿ ಬಿಡಲಿದೆ.
ಈಗಾಗಲೇ ಸಿದ್ದರಾಮಯ್ಯ ಆಪ್ತ ಬಳಗವೂ, ನೇರವಗಿಯೇ ಸಿದ್ದರಾಮಯ್ಯನವರೇ ಫುಲ್ ಟೈಂ ಸಿಎಂ ಅಂತ ಹಲವು ಬಾರಿ ಕೊಟ್ಟಿರುವ ಹೇಳಿಕೆಗಳು ರಾಜ್ಯ ಕಾಂಗ್ರೆಸ್‌ನಲ್ಲೇ ತಲ್ಲಣವನ್ನು ಸೃಷ್ಟಿಸಿದ್ದು ಇದೆ.
ಸದ್ಯ ಈಗ ಮತ್ತೇ ಡಿಕೆಶಿ ಸಿಎಂ ಕನಸಿಗೆ, ಪರೋಕ್ಷವಾಗಿ ಸಚಿವ ಎಚ್‌ಸಿ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ, ಅಂತಾ ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ಎಚ್‌ಸಿ ಮಹದೇವಪ್ಪ ಹೇಳಿಕೆ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿರುವ ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಮುಖ್ಯಮಂತ್ರಿ ಇದ್ದಾಗ ಇಂತಹ ಚರ್ಚೆ ಅನಗತ್ಯ, ಹಾಗೇ ಖಾಲಿ ಇಲ್ಲದ ಹುದ್ದೆಯ ಬಗ್ಗೆ ಮಾತಾನಾಡುವ ಅವಶ್ಯಕತೆ ಇದೆಯಾ ಅಂತಾ ಹೇಳಿದ್ದಾರೆ.