Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೋದಿ ಲೆಕ್ಕಾಚಾರದಂತೆ ಎಲ್ಲವೂ ನಡೆದು ಹೋಗ್ತಿದ್ಯಾ......?

ಮೋದಿ

geetha

ನವದೆಹಲಿ , ಗುರುವಾರ, 8 ಫೆಬ್ರವರಿ 2024 (16:13 IST)
ನವದೆಹಲಿ-ದಿನದಿಂದ ದಿನಕ್ಕೆ ಮಹಾಘಟಬಂಧನ್ ಕೋಟೆ ಬಹುತೇಕ ಹಳ್ಳ ಹಿಡಿಯುವ ಹಾಗೇ ಕಾಣ್ತಿದೆ. ಒಬ್ಬೋಬ್ಬರಾಗಿ ಇಂಡಿಯಾ ಕೂಟವನ್ನು ಬಿಟ್ಟು ಹೋಗುವ ತೀರ್ಮಾನಕ್ಕೆ ಬಂದAತಿದೆ. ನಿತೀಶ್ ಬಳಿಕ ಇದೀಗ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯೇ ಇಂಡಿಯಾ ಕೂಟದಿಂದ ಹೊರ ಹೋಗುವ ಚಿಂತನೆಯನ್ನು ಮಾಡಿದೆ ಅನ್ನುವ ಮಾತಿದೆ.ಇದೀಗ ಇಂಡಿಯಾ ಕೂಟದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗ್ತಾ ಇರೋದೇ, ಮೋದಿಯ ನೇತೃತ್ವದ ಎನ್‌ಡಿಎ ಕೂಟದ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ಅಲ್ಲಿಗೆ ಈ ಬಾರಿಯ ಡೆಲ್ಲಿ ಫೈಟ್‌ನಲ್ಲಿ ಮೋದಿಯ ಸೇನೆ ರಣವಿಕ್ರಮ ಬಾರಿಸೋದು ಬಹುತೇಕ ಅನಾಯಾಸ ಆಗಲಿದೆ ಎನ್ನಲಾಗ್ತಿದೆ.

ಇವತ್ತು ಇಡೀ ದೇಶದಲ್ಲಿ ರಾಜಕೀಯ ಪರಾಕ್ರಮವನ್ನ ಸಾಧಿಸಿದಂತೆ ಬಿಂಬಿತವಾಗ್ತಾ ಇರೋದು ಹಾಗೆ ಅವರಿಗೆ ಅವರೇ ಸಾಟಿಯಾದಂತೇ ವಿಶ್ಲೇಷಣೆ ಆಗ್ತಾ ಇರೋದು ಅದಕ್ಕೆ ತಕ್ಕಂತೆ ಅದೇ ಗತ್ತು ಗಾಂಭಿರ್ಯದಿAದ ದೇಶದ ರಾಜಕಾರಣದಲ್ಲಿ ಛಾಪು ಮೂಡಿಸುತ್ತಿರೋದು ಅದೊಂದೇ ಹೆಸರು. ಅದೇ ನಮೋ ಅರ್ಥಾತ್ ನರೇಂದ್ರ ಮೋದಿ ಭಾರತ ಕಂಡ ಜನಪ್ರಿಯ ಪ್ರಧಾನಿ ಬಟ್ ಇದೇ ಜನಪ್ರಿಯತೆ, ಹವಾ, ರಾಜ ಗಾಂಭಿರ್ಯ ರಾಜಕೀಯ ಪಟ್ಟು... ಹೀಗೆ ಎಕ್ಸೆಟ್ರಾ ಎಕ್ಸೆಟ್ರಾ... ಅಂತ ಮಿರ ಮಿರ ಮಿಂಚಾ ಇರೋ ವ್ಯಕ್ತಿತ್ವ.
 
ಬಹುಶಃ ಇಷ್ಟೆಲ್ಲಾ ಇರೋ ಕಾರಣಕ್ಕೆ ಮೋದಿ ಎಂಬ ಪ್ರಚಂಡ ಶಕ್ತಿಯನ್ನ ಸೋಲಿಸೋದಕ್ಕೆ ತೃತೀಯ ರಂಗ, ಅರ್ಥಾತ್ ಘಟಬಂಧನ್ ಹೀಗೆ ಸಾಕಷ್ಟು ರಣತಂತ್ರಗಳು ರಾಷ್ಟçದ ರಾಜಕಾರಣದಲ್ಲಿ ಆಗ್ತಾ ಬಂದಿವೆ. ಆದರೂ ಎರಡು ಅವಧಿಗೆ ಮೋದಿಯೇ ದೇಶದ ಚುಕ್ಕಾಣಿಯನ್ನ ಹಿಡಿದು, ಶಕ್ತಿ ಕೇಂದ್ರದಲ್ಲಿ ರಾಜದರ್ಬಾರ್ ಆಡಳಿತವನ್ನು ನಡೆಸುತ್ತಾ ಬಂದಿದ್ದಾರೆ.ಮೋದಿ ಎಂಬ ಅಶ್ವಮೇಧಯಾಗ ಕುದುರೆಯನ್ನ ಅಷ್ಟು ಸುಲಭವಾಗಿ ಸೋಲಿಸೋದಕ್ಕೆ ಸಾಧ್ಯವಿಲ್ಲ... ಅದು ವಿರೋಧಪಕ್ಷಗಳಿಗೂ ಅರ್ಥವಾಗಿರುವ ಸಂಗತಿ ಆದರೂ ಸದ್ದಿಲ್ಲದೇ ನಿರಂತರವಾಗಿ ಪ್ರಯತ್ನಗಳು ನಡೆದಿವೆ. ಆದರೂ ಕಾಂಗ್ರೆಸ್‌ಗೆ ಇದೀಗ ಒಂದೊAದೇ ಪಾರ್ಟಿ ಕೈ ಕೊಡ್ತಿರೋದು ಮೋದಿಯ ಸೇನೆಯ ಬಲವನ್ನು ಇನ್ನಷ್ಟು ಹಿಗ್ಗಿಸುತ್ತಿದೆ.

ಒಂದು ಗಮನಿಸಿ ನೋಡಿ ಇಲ್ಲಿ ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರವನ್ನು ಹಿಡಿದಿದೆ ಹಾಗೇ ಮತ್ತೇ ೨೦೨೪ರ ಈ ಬಾರಿಯ ಲೋಕ ಸಮರವೂ ಎದುರಾಗ್ತಿದೆ ಮತ್ತೆ ಮೋದಿಯ ನಾಯಕತ್ವದಲ್ಲೇ ಬಿಜೆಪಿ ಚುನಾವಣೆಯನ್ನ ಗೆಲ್ಲೋ ತಾಲೀಮ ನಡೆಸಿದೆ... ಹಾಗೇ ಬಿಜೆಪಿಗೇ ಅಷ್ಟೇ ಹೋಪ್ ಕೂಡ ಇದೆ ಈ ಭಾರಿಯೂ ನಮ್ಮದೇ ಗೆಲುವು ಅಂತ ಬಿಜೆಪಿಗೆ ನಂಬಿಕೆ ಇರೋದು, ಪಕ್ಷದ ಸಂಘಟನೆಯ ಮೇಲೆನೋ, ಅಥವಾ ಇನ್ಯಾವುದೋ ಸಿದ್ಥಾಂತದ ಮೇಲಲ್ಲ ಬದಲಾಗಿ ಮೋದಿ ಎಂಬ ದೈತ್ಯ ಅಲೆಯ ಶಕ್ತಿಯ ಮೇಲೆ ಇಲ್ಲಿ ಬಿಜೆಪಿಯೇತರ ಸರ್ಕಾರ ದೇಶದಲ್ಲಿ ಪ್ರತಿಷ್ಠಾಪನೆ  ಅಗಬೇಕಾದರೇ ಮೊದಲು ಬಿಜೆಪಿಯನ್ನ ಸೋಲಿಸಬೇಕು ಅಂತ ಲೆಕ್ಕಾಚಾರ ಹಾಕಿಕೊಂಡ್ರೆ ಅದು ಶುದ್ದ ಸುಳ್ಳು.

ಯಾಕಂದ್ರೆ ಬಿಜೆಪಿಯನ್ನ ಹೊರತಾದ ಪರ್ಯಾಯ ಸರ್ಕಾರ ದೆಲ್ಲಿಯಲ್ಲಿ ದರ್ಬಾರ್ ನಡೆಸಬೇಕಾದರೆ ಬಿಜೆಪಿಯನ್ನ ಮಕಾಡೆ ಮಲಗಿಸೋದಲ್ಲ. ಅದಕ್ಕೂ ಮೊದಲು ಮೋದಿಯನ್ನ ಸೋಲಿಸಬೇಕು, ನಮೋವಿನ ಅಲೆಯನ್ನ ತಗ್ಗಿಸುವ ಕೆಲಸವಾಗಬೇಕು.... ಅದಾದರೇ ಮಾತ್ರ ಘಟಬಂಧನ್ ತಂತ್ರಗಾರಿಕೆಗೆ ಒಂದಾರ್ಥ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕಚೇರಿಗೆ ಮಸಿ