Webdunia - Bharat's app for daily news and videos

Install App

ಬಯಾಸ್ಕೋಪ್‍ಗೆ ಮರುಜೀವ ನೀಡಿದ ವಾರ್ತಾ ಇಲಾಖೆ

Webdunia
ಸೋಮವಾರ, 6 ಫೆಬ್ರವರಿ 2017 (12:18 IST)
ನಲವತ್ತು ವರ್ಷಗಳ ಹಿಂದೆ ಸಣ್ಣವರಿದ್ದಾಗ ಬಹಳಷ್ಟು ಮಂದಿ ಜಾತ್ರೆ , ಸಂತೆಗಳಲ್ಲಿ ಈ ಬಯೋಸ್ಕೋಪನ್ನು ನೋಡಿದ್ದಿರಬಹುದು. ಅವುಗಳ ಒಳಗೆ ಇಣುಕಿ ಅಂದಿನ ಸಿನಿಮಾತಾರೆಯರ , ತಾಜಮಹಲ್ , ಕೆ ಆರ್ ಎಸ್ ಇತ್ಯಾದಿ ಪ್ರವಾಸಿ ತಾಣಗಳ ಚಿತ್ರಗಳನ್ನ ಕುತೂಹಲದಿಂದ ನೋಡಿರಬಹುದು. ಈಗ ವಾರ್ತಾ ಇಲಾಖೆ ಈ ಬಯೋಸ್ಕೋಪನ್ನು ಮತ್ತೆ ಮರು ಚಲಾವಣೆಗೆ ತಂದಿದೆ.
 
ಈ ಹಿಂದೆ ನೆಹರು 125 ನೇ ವರ್ಷಾಚರಣೆ , ದೇವರಾಜ ಅರಸು ಶತಮಾನೋತ್ಸವ ಸಂದರ್ಭದಲ್ಲಿ ಈ ಬಯೋಸ್ಕೋಪ್ ಮೂಲಕ ಅವರ ಜೀವನ ಚಿತ್ರಣವನ್ನು ಜನರಿಗೆ ನೀಡಲಾಗಿತ್ತು . ಇದೀಗ ವಾರ್ತಾ ಇಲಾಖೆ ಈ ಬಯೋಸ್ಕೋಪ್ ಮೂಲಕ ಸರ್ಕಾರದ ಜನಪ್ರಿಯ ಹಾಗೂ ಜನಪರ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಪ್ರಯತ್ನ ನಡೆಸಿದೆ . ನಮ್ಮ ಈ ಪ್ರಯತ್ನ ನಿಮಗೆ ಆಕರ್ಷಣೆ ಹುಟ್ಟಿಸಿದೆ ಎನ್ನುವ ವಿಶ್ವಾಸ ನಮ್ಮದು ಎನ್ನುತ್ತಾರೆ ವಾರ್ತಾ ಇಲಾಖೆ ನಿರ್ದೇಶಕರಾದ  ಎನ್ . ಆರ್ ವಿಶುಕುಮಾರ್ ಅವರು.
 
ವಾರ್ತಾ ಇಲಾಖೆ ಸದಾ ಹೊಸತನಕ್ಕೆ ತುಡಿಯುವ ಇಲಾಖೆ.  ತನ್ನ ಪ್ರಚಾರ ವಿಧಾನಗಳಲ್ಲಿ ಕಾರ್ಯಕ್ರಮಗಳಲ್ಲಿ ಸದಾ ನಾವಿನ್ಯತೆ , ಕುತೂಹಲ, ಆಕರ್ಷಣೆ ಇರಬೇಕೆಂದು ಬಯಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಹಳೆಯ ಪ್ರಚಾರ ಉಪಕರಣ ಬಯಾಸ್ಕೋಪಿಗೆ ಮರು ಜೀವ ತುಂಬುವ ಕಾರ್ಯವನ್ನು ಇಲಾಖೆ ಕೈಗೆತ್ತಿ ಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments