ಹೊಸಬಾಳೆ ಹೇಳಿಕೆ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.ಅಸಮಾನತೆ, ನಿರುದ್ಯೋಗ ಎಲ್ಲವನ್ನೂ ಸ್ಪೀಕರಿಸ್ತೇವೆ.ಸದುದ್ದೇಶದಿಂದ ಏನೇ ಹೇಳಿದ್ರು ಸ್ವೀಕರಿಸ್ತೇವೆ.ಅಸಮಾನತೆ, ಬಡತನ ಇವೆಲ್ಲಾ ವಿಶ್ವಗುರು ಆಗಲು ಇರೋ ಅಡೆತಡೆಗಳು.ಇವೆಲ್ಲಾ ತೊಡೆದು ಹೋದ್ರೆ ವಿಶ್ವಗುರು ಆಗಬಹುದು.ಜಾತೀಯತೆ ಮೂಲಕ ಓಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ನೋಡ್ತಿದ್ದಾರೆ.ಹೀಗಿದ್ದಾಗಲೇ ಅಸ್ಪೃಶ್ಯತೆ ಹೆಚ್ಚಾಗಲು ಕಾರಣವಾಗಿದೆ.ಅದನ್ನ ಹೋಗಲಾಡಿಸಲು ಸರ್ಕಾರದ ಮಟ್ಟದಲ್ಲಿ ಹಾಗೂ ಬಿಜೆಪಿ ಪಕ್ಷದಿಂದ ನಿರ್ಣಯ ತೆಗೆದುಕೊಳ್ತೇವೆ.ಅರವತ್ತು ವರ್ಷದಿಂದ ಆಳಿದ ಅವರು ಪ್ರಜಾಪ್ರಭುತ್ವ, ಅಸಮಾನತೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಮ್ಮ ರಾಜ್ಯದವರು ಕೂಡ ಅಭ್ಯರ್ಥಿ ಆಗಿದ್ದಾರೆ.ಖರ್ಗೆ ಅವರು ತಾವೇ ಒಪ್ಪಿ ಆ ಸ್ಥಾನಕ್ಕೆ ಹೋಗಿಲ್ಲ.ಸೋನಿಯಾ ಕುಟುಂಬ ಒಪ್ಪಿದ್ರೆ ಮಾತ್ರ ಇವರು ಅಧ್ಯಕ್ಷರಾಗಬಹುದು.ಇಲ್ಲದಿದ್ರೆ ಅವರು ಆ ಸ್ಥಾನ ಪಡೆಯಲೂ ಆಗಲ್ಲ.ಸ್ವಂತ ನಿರ್ಣಯ ತೆಗೆದುಕೊಳ್ಳಲು ಇವರಿಗೆ ಸ್ವಾತಂತ್ರ್ಯ ಇಲ್ಲ.ಮಲ್ಲಿಕಾರ್ಜುನ ಖರ್ಗೆ ಅವರು ಆ ಮಟ್ಟಕ್ಕೆ ಹೋಗಬಾರದಿತ್ತು.ಜೀತ ಪದ್ಧತಿ ಹೋದ ಬಳಿಕವೂ, ಇಂತ ಮನಸ್ಥಿತಿ ಇದೆ.ಮೊದಲು ಅದು ಹೋಗಬೇಕೆಂದು ಸಿಟಿ ರವಿ ಹೇಳಿದ್ದಾರೆ.
ಸರ್ಕಾರದ ಮೇಲೆ ವಿವಿಧ ಆರೋಪಗಳ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.ಟೂಲ್ ಕಿಟ್‌ನ ಒಂದು ಭಾಗ.ಟೂಲ್ ಕಿಟ್ಟನ್ನ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಮಾಡಿದ್ದಾರೆ.ಲೋಕಾಯುಕ್ತಕ್ಕೆ ಹಲ್ಲು ಕಿತ್ತು, ಎಸಿಬಿ ರಚನೆ ಮಾಡಿದ್ರು.ಈಗ ಲೋಕಾಯುಕ್ತ ಬಾಗಿಲು ತೆರೆದಿದೆ.ಸಿದ್ದರಾಮಯ್ಯ ಆಗಿರಬಹುದು, ಕಂಟ್ರಾಕ್ಟರ್‌ಗಳ ಬೇರೆ ಯಾರೇ ಆಗಿದ್ರೂ ಕೂಡ ದೂರು ನೀಡಬಹುದು.40% ಆಗಿರಬಹುದು, ಯಾವುದೇ ವಿಚಾರದ ದಾಖಲೆ ಇದ್ರೆ ದೂರು ಕೊಡಬಹುದು.ಲೋಕಾಯುಕ್ತದಲ್ಲಿ ಆರೋಪ ಸಾಭೀತಾದ್ರೆ ಒಂದು ಕ್ಷಣವೂ ಇಲ್ಲಿ ಉಳಿಯೋದಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.