ಕಚ್ಚಾ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇಂದು ದೇಶಾದ್ಯಂತ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳು ದೇಶವ್ಯಾಪಿ ಮುಷ್ಕರ ಕೈಗೊಂಡಿದ್ದು, ಇಂದು ದೇಶಾದ್ಯಂತ ಸಣ್ಣ ಕೈಗಾರಿಕೆಗಳು ಬಂದ್ ಆಗಲಿವೆ.
ಎಂಎಸ್‌ಎಂಇ ಬಂದ್ ನಿಂದಾಗಿ ಸುಮಾರು 35 ಸಾವಿರ ಕೋಟಿ ರೂ.
ನಷ್ಟು ಉತ್ಪಾದನೆ ನಷ್ಟವಾಗಲಿದೆ. 10 ಲಕ್ಷ ಕೈಗಾರಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಇಷ್ಟೊಂದು ಪ್ರಮಾಣದ ಉತ್ಪಾದನೆ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಅಖಿಲ ಭಾರತ ಎಂಎಸ್‌ಎಂಇ ಸಂಘಟನೆಯ ಸದಸ್ಯ ಆರ್. ರಾಮಮೂರ್ತಿ ಅವರು, ಕಚ್ಚಾವಸ್ತು ಬೆಲೆ ದಿನೇದಿನೇ ಏರಿಕೆಯಾಗುತ್ತಿದೆ. ಎಲ್ಲಾ ರೀತಿಯ ಕಚ್ಚಾವಸ್ತುಗಳ ಬೆಲೆ ಏರಿದ್ದರೂ, ಸರ್ಕಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಕೈಗಾರಿಕೆ ವಲಯದ ಉತ್ಪಾದನೆ ಮತ್ತು ದುಡಿಯುವ ಬಂಡವಾಳದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ. ಕಚ್ಚಾ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಬೇಕೆಂಬುದೇ ಸಣ್ಣ ಕೈಗಾರಿಕೆಗಳ ಪ್ರಮುಖ ಬೇಡಿಕೆಯಾಗಿದ್ದು, ಇಂದು ದೇಶಾದ್ಯಂತ ಸಣ್ಣ ಕೈಗಾರಿಕೆಗಳು ಸ್ಥಗಿತವಾಗಲಿವೆ.