Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿರಾ ಕ್ಯಾಂಟಿನ್ ಅವ್ಯವಹಾರ ಆರೋಪ: ಯಾವುದೇ ತನಿಖೆಗೆ ಸಿದ್ದ ಎಂದ ಪರಮೇಶ್ವರ್

ಇಂದಿರಾ ಕ್ಯಾಂಟಿನ್ ಅವ್ಯವಹಾರ ಆರೋಪ: ಯಾವುದೇ ತನಿಖೆಗೆ ಸಿದ್ದ ಎಂದ ಪರಮೇಶ್ವರ್
ಬೆಂಗಳೂರು , ಗುರುವಾರ, 20 ಜುಲೈ 2017 (19:08 IST)
ಇಂದಿರಾ ಕ್ಯಾಂಟಿನ್ ಯೋಜನೆಯಲ್ಲಿ ಅವ್ಯವಹಾರವಾಗಿ ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಳ್ಳಿಹಾಕಿದ್ದಾರೆ. 
 
ಕೆಲವರು ಹೊಟ್ಟೆ ಉರಿಯಿಂದಾಗಿ ಅನಗತ್ಯವಾಗಿ ಇಂದಿರಾ ಕ್ಯಾಂಟಿನ್ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಬಿಜೆಪಿ ಮುಖಂಡರು ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಹಸಿವು ನೀಗಿಸುವ ಯೋಜನೆಗಳಲ್ಲಿ ಅವ್ಯವಹಾರ ಮಾಡುವುದಿಲ್ಲ. ಎಸಿಬಿ ಅಥವಾ ಲೋಕಾಯುಕ್ತ ತನಿಖೆಯಾಗಲಿ ಎದುರಿಸಲು ನಾವು ಸಿದ್ದರಿದ್ದೇವೆ ಎಂದು ತಿರುಗೇಟು ನೀಡಿದರು.
 
ಬಡವರಿಗೆ, ದೀನ ದಲಿತರ, ಶೋಷಿತರಿಗೆ ಆಶಾಕಿರಣವಾಗಿರುವ ಇಂದಿರಾ ಕ್ಯಾಂಟಿನ್ ಜಾರಿಯಿಂದ ತಮ್ಮ ಪಕ್ಷಕ್ಕೆ ಹೊಡತ ಬೀಳಲಿದೆ ಎನ್ನುವ ದುರುದ್ದೇಶದಿಂದ ವಿಪಕ್ಷಗಳು ಯೋಜನೆ ಜಾರಿಗೆ ಅಡ್ಡಬರುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಗುಡುಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸೋಲುತ್ತೇವೆಂದು ಚುನಾವಣೆಯಲ್ಲಿ ಸ್ಪರ್ಧಿಸದಿರಲು ಆಗುತ್ತಾ: ಮಲ್ಲಿಕಾರ್ಜುನ್ ಖರ್ಗೆ