ಭಾರತ ಮೂಲದ ದಂಪತಿ ಅಮೆರಿಕಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಗರ್ಭಿಣಿಯಾಗಿದ್ದ ಪತ್ನಿ ಗರಿಮಾ ಕೊಠಾರಿ ಮನೆಯಲ್ಲಿ ಕೊಲೆಯಾಗಿದ್ದರೆ, ಪತಿ ಮೋಹನ್ ಶವ ನದಿಯೊಂದರಲ್ಲಿ ಪತ್ತೆಯಾಗಿದೆ.
ಗರಿಮಾ ರನ್ನು ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿ ಆ ಬಳಿಕ ಪತಿ ಮೋಹನ್ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಮೇಲ್ನೋಟಕ್ಕೆ ಶಂಕೆ ವ್ಯಕ್ತಪಡಿಸಿದ್ದಾರೆ.
ದಂಪತಿಯ ಸಾವಿನ ನಿಖರ ಕಾರಣ ಹುಡುಕಲು ಪೊಲೀಸರು ಮುಂದಾಗಿದ್ದಾರೆ.