ಬೆಂಗಳೂರು: ಚಂದ್ರಗ್ರಹದ ಮೇಲೆ ಇಳಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿರುವ ಬಾಹ್ಯಾಕಾಶ ಸಂಸ್ಥೆಗೆ, ಚಂದ್ರನ ಮೇಲ್ಮೈಯಂತೆ ಕಾಣುವ ವ್ಯಕ್ತಿಯೊಬ್ಬ ವಾಕ್ ಮಾಡುತ್ತಿರುವ ವಿಡಿಯೋವನ್ನು ನಾಗರಿಕರು ವೈರಲ್ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 7 ರಂದು ಭಾರತದ ಮಿಷನ್ ಚಂದ್ರಯಾನ್ -2 ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟುವ ಕೆಲವೇ ದಿನಗಳ ಮೊದಲು, ಭಾರತದ ಪ್ರಸಿದ್ಧ ಬೀದಿ ಕಲಾವಿದ ಬಾದಲ್ ನಂಜುಂಡಸ್ವಾಮಿ, ಬೆಂಗಳೂರಿನಲ್ಲಿರುವ ನಗರ ಸಭೆಯ ದುರಾಡಳಿತವನ್ನು ಎತ್ತಿ ತೋರಿಸುವ ಮೂಲಕ ಹೆಡ್‌ಲೈನ್‌ನಲ್ಲಿ ಮಿಂಚಿದ್ದಾರೆ.
ನಂಜುಂಡಸ್ವಾಮಿ, ರಂಗಭೂಮಿ ನಟ ಮತ್ತು ಚಲನಚಿತ್ರ ನಟ ಪೂರ್ಣಚಂದ್ರ ಮೈಸೂರು ಅವರ ಸಹಾಯವನ್ನು ಪಡೆದು ನಗರದ ಬೀದಿಗಳಲ್ಲಿ ಹಾಳಾಗುತ್ತಿರುವ ಪಾದಚಾರಿ ಮಾರ್ಗಗಳ ಅನಧಿಕೃತ ಆಕ್ರಮಣ ತೋರಿಸಲು ‘ಮೂನ್‌ವಾಕ್’ ಅನ್ನು ಪ್ರದರ್ಶಿಸಿದ್ದಾರೆ.
ಶನಿವಾರ ಸುಮಾರು ರಾತ್ರಿ 10 ಗಂಟೆಗೆ, ನಂಜುಂಡಸ್ವಾಮಿ ಸ್ಥಳೀಯ ವೇಷಭೂಷಣ ವಿನ್ಯಾಸಕರಿಂದ ವಿನ್ಯಾಸಗೊಳಿಸಲಾದ ಬಾಹ್ಯಾಕಾಶ ಡ್ರೆಸ್ ಧರಿಸಿ ‘ಚಂದ್ರನ ಮೇಲ್ಮೈಯ ಪಾದಯಾತ್ರೆಯಂತೆ ನಗರದ ರಸ್ತೆಗಳಲ್ಲಿರುವ ಹೊಂಡ ತಗ್ಗುಗಳ ಮಧ್ಯೆ ಸಂಚರಿಸಿದರು.
ಸಂಪೂರ್ಣ ದೃಶ್ಯಗಳನ್ನು ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ, ಯಾವುದೇ ಹೆಚ್ಚುವರಿ ದೀಪಗಳನ್ನು ಬಳಸಲಾಗಿಲ್ಲ. ಆದ್ದರಿಂದ ಸ್ವಾಭಾವಿಕವಾಗಿ, ಅದು ಮಾಡಿದ ರೀತಿಯಲ್ಲಿ ಹೊರಹೊಮ್ಮುತ್ತದೆ ಎಂದು ನಾನು ಉಹಿಸಿರಲಿಲ್ಲ. ವೀಡಿಯೊವನ್ನು ಚಿತ್ರೀಕರಿಸಲು ಅಂದಾಜು 8000 ರೂ ($ 111) ವೆಚ್ಚವಾಗುತ್ತದೆ ಎಂದು ನಂಜುಂಡಸ್ವಾಮಿ ತಿಳಿಸಿದ್ದಾರೆ.
ಬೀದಿ ಕಲಾವಿದರಾದ ನಂಜುಂಡ ಸ್ವಾಮಿ ಮಾಡಿದ ಅದ್ಭುತ ವಿಡಿಯೋಗೆ ನೆಟ್ಟಿಗರು ತುಂಬಾ ಹೊಗಳಿದ್ದಾರೆ. ನಗರದ ರಸ್ತೆಗಳಲ್ಲಿರುವ ಹೊಂಡಗಳ ವಿರುದ್ಧ ವಿನೂತನ ಪ್ರತಿಭಟನೆ ಮಾಡಿದ್ದೀರಿ ಧನ್ಯವಾದಗಳು ಎಂದು ಸಂಭ್ರಮ ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ಇಸ್ರೋ ಚಂದ್ರಗ್ರಹಕ್ಕೆ ಮಾನವನನ್ನು ಕಳುಹಿಸಿರಬಹುದು ಎಂದು ಭಾವಿಸಿದ್ದೆ. ಅಯೋ ಇದು ಬೆಂಗಳೂರು ರಸ್ತೆಗಳು ಎಂದು ಗೊತ್ತಾಯಿತು. ಬಿಬಿಎಂಪಿ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಅಭಿಮಾನಿಯೊಬ್ಬ ಟಾಂಗ್ ನೀಡಿದ್ದಾರೆ.
ಸ್ಥಳೀಯ ರಾಜಕಾರಣಿಗಳು ತಮ್ಮ ತಮ್ಮ ಕ್ಷೇತ್ರಗಳನ್ನು ಸುಧಾರಿಸಲು ಹೆಚ್ಚಿನದನ್ನು ಮಾಡುವಂತೆ ಒತ್ತಡ ಹೇರುವ ಉದ್ದೇಶದಿಂದ ನಂಜುಂಡಸ್ವಾಮಿ ಇದೇ ರೀತಿಯ ಅನೇಕ ಸಾಹಸಗಳನ್ನು ಮಾಡಿ ಹೆಸರುವಾಸಿಯಾಗಿದ್ದಾರೆ.
ಕಳೆದ 2015 ರಲ್ಲಿ ರಸ್ತೆಯ ಮಧ್ಯದಲ್ಲಿದ್ದ ಗುಂಡಿಯನ್ನು ಮುಚ್ಚಲು ಅಧಿಕಾರಿಗಳು ವಿಫಲರಾದಾಗ ನಂಜಂಡಸ್ವಾಮಿ ಆ ಗುಂಡಿಯಲ್ಲಿ ಮೊಸಳೆಯನ್ನು ತಂದಿಟ್ಟಿದ್ದರು. ಇದನ್ನು ಕಂಡು ಗಾಬರಿಯಾದ ಅಧಿಕಾರಿಗಳು ಕೂಡಲೇ ಗುಂಡಿಯನ್ನು ಮುಚ್ಚಿಸಿದರು.