ರಾಜಕೀಯ ಜಿದ್ದಾ ಜಿದ್ದಿನಿಂದಲೆ ಹೆಸರುವಾಸಿಯಾಗಿರುವ ಹೊಸಕೋಟೆಯಲ್ಲಿ ಇದೀಗ ಕೈ ಪಾಳಯದಲ್ಲೆ ಕಲಹ ಶುರುವಾಗಿದ್ದು ಕೈ ನಾಯಕರ ವಿರುದ್ದ ಮುಖಂಡರು ಆಕ್ರೋಶಗೊಂಡಿದ್ದಾರೆ. ಮನೆಯೊಂದು ಮೂರು ಬಾಗಿಲು ಎಂಬಂತೆ ಕ್ಷೇತ್ರದ ಕಾಂಗ್ರೇಸ್ ಪರಿಸ್ಥಿತಿಯಾಗಿದ್ದು ಶಾಸಕ ಶರತ್ ವಿರುದ್ದ ಸಿಡಿದೆದ್ದ ಮೂಲ ಕಾಂಗ್ರೇಸ್ಸಿಗರು ಇದೀಗ ಬಿಜೆಪಿಯ ಕದ ತಟ್ಟಿದ್ದಾರೆ.
ಹೊಸಕೋಟೆ ರಾಜ್ಯ ರಾಜಧಾನಿಗೆ ಹೊಂದಿಕೊಂಡಿರುವ ಹೆಬ್ಬಾಗಿಲಿನಲ್ಲಿರುವ ಈ ಕ್ಷೇತ್ರ ಅಭಿವೃದ್ದಿಗಿಂತ ರಾಜಕೀಯ ಕೆಸರೆರಚಾಟ ಹೊಡೆದಾಟ ಬಡಿದಾಟದಿಂದಲೆ ಸದ್ದು ಮಾಡಿದ್ದು ಹೆಚ್ಚು. ಇದೀಗ ಮತ್ತೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಕ್ಷೇತ್ರದಲ್ಲಿ ಪಾಲಿಟಿಕ್ಸ್ ಜೋರಾಗಿದ್ದು ಕ್ಷೇತ್ರದ ಮೂಲ ಕಾಂಗ್ರೇಸ್ ಮುಖಂಡರು ಇದೀಗ ಕಾಂಗ್ರೇಸ್ ತೊರೆದು ಬಿಜೆಪಿ ಕದತಟ್ಟುತ್ತಿದ್ದು ಶಾಸಕ ಮತ್ತು ಕೈ ನಾಯಕರ ವಿರುದ್ದ ಸಿಡಿದೆದ್ದಿದ್ದಾರೆ.
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ಸಿನಲ್ಲಿ ಇದೀಗ ಕಲಹ ಶುರುವಾಗಿದ್ದು ಕಾಂಗ್ರೇಸ್ ತೊರೆದು ಮೂಲ ಕಾಂಗ್ರೇಸಿಗರು ಬಿಜೆಪಿ ಸೇರಲು ಮುಂದಾಗಿದ್ದಾರೆ. ನಗರದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೇಮಂತ್ ರನ್ನ ಪಕ್ಷ ವಿರೋಧಿ ಚಟುವಟಿಕೆ ಮಾಡ್ತಿದ್ದಾರೆ ಅಂತ ಜಿಲ್ಲಾಧ್ಯಕ್ಷ ಎರಡು ದಿನಗಳಿಂದೆ ಉಚ್ಚಾಟನೆ ಮಾಡ್ತಿರುವುದಾಗಿ ಆದೇಶ ಮಾಡಿದ್ರು. ಹೀಗಾಗಿ ಉಚ್ಚಾಟನೆ ಮಾಡ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮತ್ತು ಕೆಲ ಮೂಲ ಕಾಂಗ್ರೇಸ್ ಮುಖಂಡರು ಕೈ ನಾಯಕರ ವಿರುದ್ದ ಆಕ್ರೋಶ ಹೊರ ಹಾಕಿದ್ರು. ಕಾಂಗ್ರೇಸ್ ಪಕ್ಷಕ್ಕೆ ಶಾಸಕ ಶರತ್ ಬಚ್ಚೇಗೌಡ ಬಂದಾಗಲಿಂದಲು ಮೂಲ ಕಾಂಗ್ರೇಸ್ಸಿಗರ ನ್ನ ಕಡೆಗಣಿಸಿ ಅವರ ಬೆಂಬಲಿಗರನ್ನ ಬೆಳೆಸುವ ಕೆಲಸ ಮಾಡ್ತಿದ್ದಾರೆ. ನಾವು ಹಲವು ಭಾರಿ ಕೈ ನಾಯಕರಿಗೆ ದೂರುಗಳನ್ನ ನೀಡಿ ಮೂಲ ಕಾಂಗ್ರೇಸಿಗರನ್ನ ಗುರುತಿಸುವಂತೆ ಕೇಳಿದ್ರು ಮಾಡದೆ ನಾವು ಪಕ್ಷ ವಿರೋದಿ ಚಟುವಟಿಕೆ ಮಾಡ್ತಿದ್ದೇವೆ ಅಂತಿದ್ದಾರೆ. ಹೀಗಾಗಿ ತಾಯಿಯಂತಿದ್ದ ಪಕ್ಷವನ್ನ ಬಿಟ್ಟು ಬಿಜೆಪಿಗೆ ಹೋಗುತ್ತಿರುವುದಕ್ಕೆ ತುಂಬಾ ನೋವಾಗುತ್ತಿದೆ ಅಂತ ಮುಖಂಡ ಹೇಮಂತ್ ಕುಮಾರ್ ಕಣ್ಣೀರು ಹಾಕಿದ್ರು.
ಶಾಸಕ ಶರತ್ ಕಾಂಗ್ರೇಸ್ ನಲ್ಲಿ ತಮ್ಮ ಬೆಂಬಲಿಗರಿಗೆ ಮಾತ್ರ ಮಣೆ ಹಾಕ್ತಿದ್ದು ಮೂಲ ಕಾಂಗ್ರೇಸ್ ಮುಖಂಡರನ್ನ ಪರಿಗಣನೆಗೆ ತೆಗೆದುಕೊಳ್ತಿಲ್ಲ ಅಂತ ಸಿದ್ದರಾಮಯ್ಯ ಮತ್ತು ಮೊಯ್ಲಿಗೆ ದೂರು ನೀಡಿದಕ್ಕೆ ನನನ್ನ ಉಚ್ಚಾಟನೆ ಮಾಡಿದ್ದಾರೆ ಅಂತ ಆರೋಪಿಸಿದ್ರು. ಅಲ್ಲದೆ ಕಾಂಗ್ರೇಸ್ ನಿಂದ 50 ಜನ ಮುಖಂಡರು ನೂರಾರು ಕಾರ್ಯಕರ್ತರು ಪಕ್ಷ ಬಿಟ್ಟು ಎಂಟಿಬಿ ನಾಗರಾಜ್ ನೇತೃತ್ವದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗ್ತಿರೋದಾಗಿ ತಿಳಿಸಿದ್ರು. ಜತೆಗೆ ಮೂರು ವರ್ಷಗಳ ಕಾಲ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆ ಉಚಿತವಾಗಿ ಕಛೇರಿ ನೀಡಿದ್ದೆ ಆದ್ರೆ ಇದೀಗ ಕಛೇರಿಯನ್ನು ಬಂದ್ ಮಾಡುತ್ತಿರುವುದಾಗಿ ಹೇಳಿ ಕಾಂಗ್ರೇಸ್ ಚಿಹ್ನೆಗಳನ್ನ ಕಿತ್ತುಹಾಕಿ ಕಾಂಗ್ರೇಸ್ ಬಾವುಟದ ಮೇಲೆ ಬಣ್ಣವನ್ನ ಬಳೆದು ಕಛೇರಿಗೆ ಬೀಗ ಜಡಿದ್ರು.