ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮೇಲೆ ಮೊಟ್ಟ ಮೊದಲ ಬಾರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಅಗಮಿಸಿದ್ದ ಈಶ್ವರ ಖಂಡ್ರೆ ಎದುರಲ್ಲೇ ಅಸಮಧಾನದ ಹೊಗೆ ಭುಗಿಲೆದ್ದಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮಾಜಿ ಸಚಿವ ಆಂಜನೇಯ ಅವರನ್ನು ಕಡೆಗಣಿಸಲಾಗಿದೆ ಅಂತ ಖಂಡ್ರೆ ಸನ್ಮಾನದ ವೇಳೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಶವಂತ್ ಆಕ್ಷೇಪ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಟಿಕೇಟ್ ನೀಡುವಂತೆ ಮಾಜಿ ಜಿಲ್ಲಾಧ್ಯಕ್ಷ ಸೇತುರಾಂ ಕೂಡ ಆಗ್ರಹಿಸಿದರು. ಕಾರ್ಯಧ್ಯಕ್ಷರ ಎದುರೇ ಏರು ದ್ವನಿಯಲ್ಲಿ ಮಾತನಾಡಿದ ಕಾರ್ಯಕರ್ತರ ನಡೆ ಖಂಡ್ರೆಗೆ ಇರಿಸು ಮುರಿಸುಗೊಳಿಸಿದ್ದೂ, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಕಡೆಗಣನೆ ಎಂಬ ಬಿನ್ನಮತವನ್ನು ಶಮನಗೊಳಿಸಲು ನೂತನ ಕಾರ್ಯಧ್ಯಕ್ಷ ಖಂಡ್ರೆ ಹರಸಾಹಸಪಟ್ಟರು.
ಕಾರ್ಯಕರ್ತರ ಅಸಮಧಾನಕ್ಕೆ ದನಿಗೂಡಿಸಿದ ಖಂಡ್ರೆ ಈ ಜಿಲ್ಲೆಯಲ್ಲಿ ನಮ್ ಪಕ್ಷದವರೇ ಸಂಸದರಾಗಬೇಕೆಂಬ ಅಭಿಪ್ರಾಯ ನಮ್ಮದು ಎಂದು ಕಾರ್ಯಕರ್ತರ ಪರ ಬ್ಯಾಟ್ ಬೀಸಿದ್ರು. ಜೊತೆಗೆ ಈ ಕರ್ನಾಟಕ ರಾಜ್ಯ ಕಾಂಗ್ರೆಸ್ನ ಭದ್ರ ಕೊಟೆಯಾಗಿದ್ದೂ ವಿಧಾನ ಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆದರೂ ಕೂಡ ಸಮ್ಮಿಶ್ರ ಸರ್ಕಾರದಲ್ಲಿ ಬಹುಪಾಲು ನಮ್ಮದಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ನಾವು ಪುಟಿದೇಳಬೇಕು. ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಥವಾ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಗೆಲ್ಲಬೇಕೆಂಬ ಉದ್ದೇಶದಿಂದ ಚುನಾವಣಾ ಮೈತ್ರಿ ಬಗ್ಗೆ ಕಾಂಗ್ರೆಸ್ ವರಿಷ್ಟರು ಶೀಘ್ರದಲ್ಲೇ ತೀರ್ಮಾನ ಮಾಡಲಿದ್ದಾರೆ. ಅಲ್ದೇ ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದ ರಾಮಯ್ಯ ಸೂಚನೆಯಂತೆ 7 ಕೆಜಿ ಪಡಿತರ ಅಕ್ಕಿಯನ್ನು ರಾಜ್ಯದಲ್ಲಿ ಎಂದಿನಂತೆ ಈ ಸರ್ಕಾರ ನೀಡಲಿದೆ ಎಂದ್ರು.