ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್‌ಗೆ ಹಣ ಕೊಡುವುದು ಮಾಮೂಲು. ಆದರೆ, ನಮ್ಮದು ಪ್ರಾದೇಶಿಕ ಪಕ್ಷವಾಗಿದ್ದರಿಂದ ಅಂತಹ ಸಂಸ್ಕ್ರತಿಯಿಲ್ಲ ಎಂದು ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಯಾರು ಹಣ ಸಂಗ್ರಹಿಸುತ್ತಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಸಂಗ್ರಹಿಸಿದ ಎಲ್ಲಾ ಹಣವನ್ನು ಹೈಕಮಾಂಡ್‌ಗೆ ನೀಡುವುದಿಲ್ಲ. 10 ಕೋಟಿ ರೂಪಾಯಿ ಸಂಗ್ರಹಿಸಿದರೆ 1 ಕೋಟಿ ರೂಪಾಯಿ ಹಣವನ್ನು ಹೈಕಮಾಂಡ್‌ಗೆ ನೀಡುತ್ತಾರೆ ಎಂದರು.
ಉಳಿದ ಹಣವನ್ನು ಯಾರು ಯಾರು ಹಂಚಿಕೊಳ್ಳುತ್ತಾರೋ ನಮಗೆ ಗೊತ್ತಾಗುವುದಿಲ್ಲ. ಆದರೆ, ರಾಷ್ಟ್ರೀಯ ಪಕ್ಷಗಳಿಂದ ಹೈಕಮಾಂಡ್‌ಗೆ ದೇಣಿಗೆ ಹೋಗುವುದು ಸತ್ಯ ಸಂಗತಿಯಾಗಿದೆ. ಇದು ಇತ್ತೀಚೆಗೆ ಬಂದ ಸಂಪ್ರದಾಯ ಮೊದಲು ಹೀಗಿರಲಿಲ್ಲ ಎಂದರು.
ರಾಷ್ಟ್ರೀಯ ಪಕ್ಷಗಳಿಂದ ಹೈಕಮಾಂಡ್‌ಗೆ ದೇಣಿಗೆ ನೀಡಿರುವ ವಿಷಯ ಕುರಿತಂತೆ ಸಿಎಂ ಸಿದ್ದರಾಮಯ್ಯರನ್ನು ಟೀಕಿಸುವುದು ಸರಿಯಲ್ಲ ಎಂದು ಜೆಡಿಎಸ್ ವರಿಷ್ಛ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.