ಕೋವಿಶೀಲ್ಡ್ನ ಮೊದಲ ಮತ್ತು ಎರಡನೆಯ ಡೋಸ್ ನಡುವೆ 45 ವಾರಗಳವರೆಗೆ ವಿಸ್ತರಿಸಿದ ಮಧ್ಯಂತರವು ಪ್ರತಿಕಾಯ ಪ್ರತಿಕ್ರಿಯೆಯಲ್ಲಿ 18 ಪಟ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನವು ತಿಳಿಸುತ್ತದೆ.
ಇತ್ತೀಚೆಗೆ ಒಂದೇ ದಿನದಲ್ಲಿ 80 ಲಕ್ಷ ಡೋಸ್ ಲಸಿಕೆ ನೀಡಿ ದಾಖಲೆ ಮಾಡಿದ್ದ ಭಾರತ ಈಗ ಒಟ್ಟಾರೆ ಲಸಿಕೆ ನೀಡಿದ ಪಟ್ಟಿಯಲ್ಲಿ ಅಮೆರಿಕಾಕ್ಕಿಂತಲೂ ಮುಂದೆ ಬಂದಿದೆ.
ಆರೋಗ್ಯ ಇಲಾಖೆ ಪ್ರಕಾರ ಇದುವರೆಗೆ 32,36,63,297 ಜನರಿಗೆ ಲಸಿಕೆ ನೀಡಿಯಾಗಿದೆ. ಈ ಮೂಲಕ ಜಾಗತಿಕವಾಗಿ ಅಮೆರಿಕಾ ದೇಶವನ್ನೂ ಹಿಂದಿಕ್ಕಿದೆ. ಇದೀಗ ಕೊರೋನಾ ಕೂಡಾ ನಿಯಂತ್ರಣಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ತ್ವರಿತಗತಿಯಲ್ಲಿ ಲಸಿಕೆ ಪೂರೈಸಿ ಮೂರನೇ ಅಲೆ ಬಾರದಂತೆ ತಡೆಗಟ್ಟುವುದೇ ಸರ್ಕಾರದ ಉದ್ದೇಶವಾಗಿದೆ.