ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಅತ್ಯಂತ ಮಹತ್ವದ ಸೇವೆ ಸಲ್ಲಿಸಿದವರೆಂದರೆ ಆರೋಗ್ಯ ಕಾರ್ಯಕರ್ತರು. ಅವರಲ್ಲಿ ಬೇಡರು ತಮ್ಮ ಕುಟುಂಬವನ್ನೇ ನಿರ್ಲಕ್ಷಿಸಿ ಸಮಾಜದ ಸೇವೆಗೆ ನಿಂತರು. ಅಂತಹ ನಿಸ್ವಾರ್ಥ ಕಾರ್ಯಕರ್ತರಿಗೆ ಗೌರವ ಸಲ್ಲಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಅವರಿಗೆ ಗೌರವ ಸಲ್ಲಿಸುವುದು ಹಾಗಿರಲಿ, ಕನಿಷ್ಠ ಅವರ ಹಕ್ಕಿನ ನ್ಯಾಯವೂ ಸಿಗುತ್ತಿಲ್ಲ. ಈ ವರ್ಷ ಎಂಡಿ ಪರೀಕ್ಷೆ ಬರೆದಿರುವವರು ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಲು. ಅವರು ಬರೆದ ಪರೀಕ್ಷೆಯ ಮೌಲ್ಯಮಾಪನ ಸರಿಯಾಗಿರದೆ ಹೋದಲ್ಲಿ ಮರುಮೌಲ್ಯಮಾಪನ ಮಾಡಿಸಿಕೊಳ್ಳಬೇಕಾದದ್ದು ಸಹಜ ಹಕ್ಕು. ಆರೋಗ್ಯ ಕಾರ್ಯಕರ್ತರ ಈ ಹಕ್ಕನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಿರಾಕರಿಸುತ್ತಿದೆ. ಅವನು ಮಾಡಿದ್ದೇ ಸರಿ, ತನ್ನ ಮೌಲ್ಯಮಾಪಕರು ದೈವಾಂಶ ಸಂಭೂತರು, ಪ್ರಶ್ನಾತೀತರು ಎಂದು ರಾಆವಿವಿ (ರಾಜೀವ್ ಗಾಂಧಿ ಅರೋಗ್ಯ ವಿಶ್ವವಿದ್ಯಾಲಯಾನಿಲಯ) ಭಾವಿಸಿದಂತಿದೆ. ಈ ಹಿಂದೆ ಇದೇ ರೀತಿ ಮೊಂಡುತನ ತೋರಿ, ಎರಡು ಬಾರಿ (2019 & 2020) ಹೈಕೋರ್ಟ್ ನಿಂದ ತಪರಾಕಿ ಹಾಕಿಸಿಕೊಂಡರೂ ವಿವಿಗೆ ಬುದ್ದಿ ಬಂದಂತಿಲ್ಲ. ಸರ್ಕಾರ ಈ ವಿಚಾರವಾಗಿ ಖಂಡಿತವಾಗಿಯೂ ಮಧ್ಯಪ್ರವೇಶಿಸಿ,
ಪ್ರಮುಖ ಬೇಡಿಕೆಗಳನ್ನು ರಾಜ್ಯ ಆಪ್ ಪಕ್ಷ ಸರ್ಕಾರದ ಮುಂದಿಟ್ಟಿದೆ:
1) ಯಾವ ವಿದ್ಯಾರ್ಥಿಗಳು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ? ನಂತರ ಅವರ ಮರುಮೌಲ್ಯಮಾಪನವನ್ನು ಸರಿಯಾಗಿ ಮತ್ತು ಪಾರದರ್ಶಕವಾಗಿ ಮಾಡಬೇಕು.
2) ಬೇಕಾಬಿಟ್ಟಿ ಮೌಲ್ಯಮಾಪನ ಮಾಡಿದ ಸಿಬ್ಬಂದಿಗೆ ದಂಡ ವಿಧಿಸಿ, ಕೆಲಸದಿಂದ ವಜಾಗೊಳಿಸಬೇಕು.
3) ಕೋರ್ಟ್ ಗೆ ಹೋಗಿ ಕಾಲವ್ಯಯ ಮಾಡಿ ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕುವ ಬದಲಾಗಿ ವಿದ್ಯಾರ್ಥಿ ಸಮಸ್ಯೆ ಆಲಿಸಿ, ಕುಲಪತಿಗಳ ಮಟ್ಟದಲ್ಲಿಯೇ ನ್ಯಾಯ ಸಿಗುವಂತಾಗಲು ಸರ್ಕಾರ ಕ್ರಮ ಕೈಗೊಳ್ಳಬೇಕು.
ಈ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪೂರೈಸದೇ ಹೋದಲ್ಲಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮುಕುಂದ್ ಗೌಡ ಎಚ್ಚರಿಸಿದ್ದಾರೆ.
ಇಂದು ನೆಡೆದ ಪತ್ರಿಕಾ ಘೋಷ್ಟಿಯಲ್ಲಿ ಛಾತ್ರ ಯುವ ಸಂಘರ್ಷ ಸಮಿತಿಯ ಅಧ್ಯಕ್ಷ ಅಬ್ದುಲ್ ರಜಾಕ್ ಭಾಗವಹಿಸಿದ್ದಾರೆ.