ಯುವತಿಯೊಬ್ಬಳು ತನ್ನ ಗಂಡನ ಅಕ್ರಮ ಸಂಬಂಧದಿಂದ ಬೇಸತ್ತು ಜೀವ ಕಳೆದುಕೊಂಡಿದ್ದಾಳೆ.
ಭಾವನಾ (25) ಆತ್ಮಹತ್ಯೆಗೆ ಶರಣಾದ ಗೃಹಿಣಿಯಾಗಿದ್ದಾಳೆ. ಇಂಜಿನಿಯರ್ ಅಜಯ್ ಎಂಬಾತನನ್ನು ಕಳೆದೊಂದು ತಿಂಗಳ ಹಿಂದೆ ಭಾವನಾ ಮದುವೆಯಾಗಿದ್ದರು.
ಆದರೆ ಗಂಡ ಅಜಯ್ ಬೇರೆ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ವಿಷಯ ಭಾವನಾಗೆ ಗೊತ್ತಾಗಿದೆ. ಅನೈತಿಕ ಸಂಬಂಧದ ಫೋಟೋಗಳು ಅಜಯ್ ಮೊಬೈಲ್ ನಲ್ಲಿದ್ದವು.
ರಾಜೀ ಸಂಧಾನ ನಡೆಸಿದರೂ ಅಜಯ್ ತನ್ನ ಚಾಳಿ ಮುಂದುವರಿಸಿದ್ದರಿಂದ ಮನನೊಂದು ಭಾವನಾ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಮೈಸೂರಿನಲ್ಲಿ ಈ ಘಟನೆ ನಡೆದಿದೆ.