ಖಾಸಗಿ ಲೇವಾದೇವಿ ಇಲ್ಲವೇ ಗಿರವಿದಾರರಿಂದ ನೀವು ಪಡೆದ ಸಾಲದ ಋಣದಿಂದ ಮುಕ್ತರಾಗಬೇಕಾದರೆ ಇಲ್ಲಿಗೆ ಬನ್ನಿ.
ಖಾಸಗಿ ಲೇವಾದೇವಿ, ಗಿರವಿದಾರರಿಂದ ಪಡೆದ ಸಾಲದ ಋಣದಿಂದ ಮುಕ್ತಗೊಳಿಸುವ ಸಲುವಾಗಿ ಹಾಗೂ ರಾಜ್ಯದಲ್ಲಿನ ಸಣ್ಣ ರೈತರು, ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗಗಳ ಜನರಿಗೆ ಸಾಲದ ಋಣ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರ ಕರ್ನಾಟಕ ಋಣ ಪರಿಹಾರ ವಿಧೇಯಕ-2018 ಕಾಯ್ದೆ ಜಾರಿಗೆ ತಂದಿದೆ.
ಕಲಬುರಗಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಖಾಸಗಿ ಲೇವಾದೇವಿ, ಗಿರವಿದಾರರಿಂದ ಸಾಲ ಪಡೆದ ಸಾರ್ವಜನಿಕರು ಕಾಯ್ದೆಯಡಿ ಋಣಮುಕ್ತ ಪ್ರಯೋಜನ ಪಡೆದುಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಋಣ ಪರಿಹಾರ ವಿಧೇಯಕ-2018 ಕಾಯ್ದೆಯು 2019ರ ಜುಲೈ 23 ರಿಂದ ಜಾರಿಗೆ ಬಂದಿರುತ್ತದೆ. ಆದೇಶ ಹೊರಡಿಸಿದ ದಿನದಿಂದ 1 ವರ್ಷದವರೆಗೆ ಮಾತ್ರ ಈ ಕಾಯ್ದೆ ಜಾರಿಯಲ್ಲಿರುತ್ತದೆ.
ಹೀಗಾಗಿ ಕಾಯ್ದೆ ಜಾರಿಯಾದ ದಿನದಿಂದ 90 ದಿನದೊಳಗಾಗಿ ಆಯಾ ಪ್ರದೇಶದಲ್ಲಿ ವಾಸಿಸುವ ಭೂರಹಿತ ಕೃಷಿ ಕಾರ್ಮಿಕ, ದುರ್ಬಲ ವರ್ಗಕ್ಕೆ ಸೇರಿದ ಅಥವಾ ಸಣ್ಣ ರೈತರು ಋಣ ಪರಿಹಾರಕ್ಕಾಗಿ ಕಲಬುರಗಿ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಕಲಬುರಗಿ ಸಹಕಾರ ಸಂಘಗಳ ಉಪನಿಬಂಧಕರು ಹೇಳಿದ್ದಾರೆ.