ಶಿವಮೊಗ್ಗ : ಸಚಿವ ಕೆ.ಎನ್ .ರಾಜಣ್ಣ ಅಯೋಧ್ಯೆ ರಾಮನ ಕುರಿತು ನೀಡಿದ್ದ ಹೇಳಿಕೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಸಮರ್ಥನೆ ನೀಡಿರುವ ಶಾಸಕ ಪ್ರದೀಪ್ ಈಶ್ವರ್, ರಾಮ ಮಂದಿರವನ್ನು ಮೊದಲ ಬಾರಿಗೆ ಸಾರ್ವಜನಿಕರ ದರ್ಶನಕ್ಕೆ ತೆರೆವು ಮಾಡಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದರು.
ಇದೇ ವೇಳೆ ಗ್ಯಾರೆಂಟಿ ಯೋಜನೆಗಳು ದುರುಪಯೋಗವಾಗುತ್ತಿದೆ ಎಂದು ಬಿಜೆಪಿಯವರು ಮಾಡಿರುವ ಆರೋಪವನ್ನು ಅಲ್ಲಗೆಳೆದ ಪ್ರದೀಪ್ ಈಶ್ವರ್, ಈ ಬಗ್ಗೆ ನಾನು ಅಧಿಕೃತ ಅಂಕಿಅಂಶಗಳನ್ನು ನೀಡಬಲ್ಲೆ. ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ ಎಂದರು.
ನಾವು ಹಿಂದೂಗಳು ರಾಮಭಕ್ತರಾಗಿದ್ದು ನನ್ನ ಎದೆ ಸೀಳಿದರೆ ಶ್ರೀರಾಮ ಕಾಣಿಸುತ್ತಾನೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಶುಕ್ರವಾರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಅಯೋಧ್ಯೆಗೆ ಹೋಗುವುದು ಖಂಡಿತಾ . ಬಿಜೆಪಿಯವರು ನಮ್ಮನ್ನು ಸುಮ್ಮನೆ ರಾಮವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.