ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಬಂಧಿಸಿದ್ರೆ ಇಡೀ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ಒಂದು ವೇಳೆ ಸರಕಾರ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಿದಲ್ಲಿ ಕಾರ್ಯಕರ್ತರು ರಾಜ್ಯಕ್ಕೆ ಬೆಂಕಿ ಬೀಳುವಂತೆ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಗೃಹ ಸಚಿವರ ಸಲಹೆಗಾರ, ಮಹಾನುಭಾವ ಕೆಂಪಯ್ಯನವರನ್ನು ಸರಕಾರ ವಾಪಸ್ ಕರೆಸಿಕೊಳ್ಳಲಿ. ಅವರು ಬೆಂಕಿ ಆರಿಸಲು ಬಂದಿಲ್ಲ. ಬೆಂಕಿ ಹಚ್ಚಲು ಬಂದಿದ್ದಾರೆ. ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿಗೆ ಮಂಗಳೂರು ನಗರದ ಜವಾಬ್ದಾರಿ ನೀಡಿ ಎಂದು ತಿಳಿಸಿದ್ದಾರೆ.
ಸಚಿವರಾದ ರಮಾನಾಥ್ ರೈ, ಯು.ಟಿ.ಖಾದರ್ ಅವರು ಕೂಡಾ ಮಂಗಳೂರಿಗೆ ಹೋಗುವುದು ಬೇಡ. ನಾವು ಕೂಡಾ ಒಂದೆರೆಡು ತಿಂಗಳು ಮಂಗಳೂರಿಗೆ ಕಾಲಿಡುವುದಿಲ್ಲ. ಇದರಿಂದ ಶಾಂತಿ ನೆಲೆಸುವಂತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.