ಅಗತ್ಯ ಬಿದ್ದರೆ ಕಂಬಳ ಆಚರಣೆಗೆ ಸುಗ್ರೀವಾಜ್ಞೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳ ಗ್ರಾಮೀಣ ಕ್ರೀಡೆ. ರಾಜ್ಯದಲ್ಲಿ ಕಂಬಳ ಆಚರಣೆಗೆ ಯಾವುದೇ ಅಭ್ಯಂತರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಲ್ಲಿಕಟ್ಟು ಆಚರಣೆಯೇ ಬೇರೆ. ಕಂಬಳ ಆಚರಣೆಯೇ ಬೇರಿ. ನಾವು ಎಂದಿಗೂ ಕಂಬಳದ ಪರವಾಗಿಯೇ ಇದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪಿಎಂ ವಿರುದ್ಧ ಹರಿಹಾಯ್ದ ಸಿಎಂ...
ಬರ ಪರಿಹಾರ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಒಂದು ತಿಂಗಳಾಯ್ತು. ಆದರೂ ಸಹ ಪ್ರಧಾನಿ ನಯಾಪೈಸೆ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಕಾಮನ್ ಸೆನ್ಸ್ ಇಲ್ಲ. ಇಲ್ಲಿ ಕುಳಿತು ಮಾತನಾಡುವ ಬಿಜೆಪಿಯವರು ಕೇಂದ್ರದಿಂದ ಬರ ಪರಿಹಾರ ತೆಗೆದುಕೊಂಡು ಬರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ