ಬೆಂಗಳೂರು : ಸಿದ್ದಗಂಗಾ ಶ್ರೀಗಳಿಗೆಭಾರತ ರತ್ನ ಕೊಟ್ಟರೆ ಅದರ ಗೌರವ ಹೆಚ್ಚುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ರಾಷ್ಟ್ರದ ಮೂರು ಗಣ್ಯ ವ್ಯಕ್ತಿಗಳಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಖ್ಯಾತ ಹಿನ್ನೆಲೆ ಗಾಯಕ ಭೂಪೇನ್ ಹಜಾರಿಕ, ಸಮಾಜ ಸೇವಕ ನಾನಾಜಿ ದೇಶ್‍ಮುಖ್ ಅವರಿಗೆ ನೀಡಿದೆ. ಆದರೆ ಸಮಾಜ ಸೇವೆಗೆ ತಮ್ಮ ಇಡೀ ಜೀವಮಾನವನ್ನೇ ಮುಡಿಪಾಗಿಟ್ಟ ಸಿದ್ದಗಂಗಾ ಶ್ರೀಗಳಿಗೆ ನೀಡದೆ ಇರುವುದಕ್ಕೆ ಕನ್ನಡಿಗರಿಗೆ ಬಾರೀ ಬೇಸರವಾಗಿದೆ.
ಈ ಬಗ್ಗೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು,’ ಶ್ರೀಗಳ ಪಾರ್ಥೀವ ಶರೀರದ ಮುಂದೆ ದಿನವಿಡಿ ಕೂರುವುದು ಗೌರವ ಅಲ್ಲ. ಶ್ರೀಗಳ ಸೇವೆಗೆ ಭಾರತ ರತ್ನ ಕೊಟ್ಟಿದ್ದರೆ ಗೌರವ ಸಿಗುತ್ತಿತ್ತು. ಅವರ ಸಾಧನೆಗೆ ಭಾರತ ರತ್ನ ಕೊಟ್ಟರೆ ಅದರ ಗೌರವ ಹೆಚ್ಚುತ್ತದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.