ನಾನು ರೈತರ ಸಾಲ ಮನ್ನಾ ಮಾಡೋಕೆ ರೆಡಿಯಾಗಿದ್ದೇನೆ. ಆದರೆ, ಕೇಂದ್ರ ಸರಕಾರ ಮುಂದೆ ಬರುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಷಾದಿಸಿದರು.
ಜಿಲ್ಲೆಯ ಮಳವಳ್ಳಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಷನಲ್ ಬ್ಯಾಂಕ್‌ಗಳಿಂದ ರೈತರಿಗೆ 42 ಸಾವಿರ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಸಹಕಾರಿ ಬ್ಯಾಂಕ್‌ಗಳಿಂದ ಕೇವಲ ಶೇ. 22 ರಷ್ಟು ರೈತರಿಗೆ ಸಾಲ ನೀಡಲಾಗಿದೆ ಎಂದರು.
ನಾನು ಖುದ್ದಾಗಿ ಪ್ರಧಾನಿ ಮೋದಿಯವರ ಬಳಿ ತೆರಳಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದ್ದೆ. ಆದರೆ, ಮೋದಿ ಜಪ್ಪಯ್ಯ ಎಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್‌ಗಳಿಗೆ ವಾರ್ನಿಂಗ್ ನೀಡಿದ ಸಿಎಂ ಸಿದ್ದರಾಮಯ್ಯ, ಮಳೆ, ಬೆಳೆಯಾಗುವವರೆಗೆ ರೈತರ ಸಾಲ ವಸೂಲಿ ಮಾಡುವುದಾಗಲಿ ಅಥವಾ ನೋಟಿಸ್ ಕೊಡುವುದಾಗಲಿ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.