ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಳಿ ಟಿಕೆಟ್ ಕೇಳಲ್ಲ. ಟಿಕೆಟ್ ನೀಡುವಂತೆ ಅರ್ಜಿಯನ್ನು ಸಹ ಸಲ್ಲಿಸಿಲ್ಲ ಎಂದು ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ನಾಗಮಂಗಲ ಕ್ಷೇತ್ರದ ಶಾಸಕ ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಗೋಪಾಲಯ್ಯರನ್ನು ಬಿಟ್ಟು ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ 7 ಶಾಸಕರು ಒಟ್ಟಾಗಿದ್ದೇವೆ. ನಮಗೆ ಜೆಡಿಎಸ್ ಪಕ್ಷ ನೀಡುವ ಟಿಕೆಟ್ ಮುಖ್ಯವಲ್ಲ. ಜನರು ನೀಡುವ ಟಿಕೆಟ್ ಮುಖ್ಯ ಎಂದು ಹೇಳಿದರು.
ಜೆಡಿಎಸ್ ಪಕ್ಷದಿಂದ ನನಗೆ ನಾಗಮಂಗಲ ಕ್ಷೇತ್ರಕ್ಕೆ ಟಿಕೆಟ್ ಸಿಗಲ್ಲ. ಅದರಂತೆ, ರಮೇಶ್ ಬಾಬು ಹಾಗೂ ಬಂಡಿಸಿದ್ದೇಗೌಡರಿಗೂ ಟಿಕೆಟ್ ನೀಡಲ್ಲ. ಈ ಕುರಿತು ಮಂಡ್ಯ ಜೆಡಿಎಸ್ ನಾಯಕರು ನಿರ್ಣಯ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.
ನಾವು ಯಾವ ಪಕ್ಷ ಸೇರಬೇಕು ಎಂದು ಇನ್ನು ನಿರ್ಧರಿಸಿಲ್ಲ. ಮಾರ್ಚ್ ಮೊದಲ ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿ ಪರವಾಗಿಲ್ಲ ಎಂದು ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ಚೆಲುವರಾಯಸ್ವಾಮಿ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.