ಸದನದಲ್ಲಿ ಆಡಿರುವ ಮಾತುಗಳಿಂದ ನನ್ನ ಮನಸ್ಸಿಗೆ ಬೇಸರವಾಗಿದೆ. ಇನ್ನು ಮುಂದೆ ನಾನು ಕರ್ನಾಟಕ ಪರ ವಾದಿಸುವುದಿಲ್ಲ ವಕೀಲ ಫಾಲಿ ಎಸ್ ನಾರಿಮನ್ ತಿಳಿಸಿದ್ದಾರೆ.
ಕಾವೇರಿ ವಿಚಾರದಲ್ಲಿ ವಾದಿಸುವಂತೆ ಯಾರು ನನ್ನ ಮನೆ ಗೇಟ್ ಬಳಿ ಬರುವುದು ಬೇಡ ಎಂದು ರಾಜ್ಯ ಸರಕಾರದ ಪರವಾಗಿ ನಾರಿಮನ್ ಮನೆಗೆ ಹೋಗಿದ್ದವುರ ಮುಂದೆ ನಾರಿಮನ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಮರ್ಪಕವಾಗಿ ವಾದ ಮಂಡಿಸುವಲ್ಲಿ ಫಾಲಿ ನಾರಿಮನ್ ವಿಫಲರಾಗಿದ್ದಾರೆ. ಅವರನ್ನು ಕೂಡಲೇ ಕೈಬಿಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಇದೀಗ ರಾಜ್ಯದ ಪರವಾಗಿ ವಾದ ಮಂಡಿಸುವುದಿಲ್ಲ ಎಂದು ಫಾಲಿ ಎಸ್ ನಾರಿಮನ್ ತಿಳಿಸಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಈ ಕೂಡಲೇ ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ಅವರನ್ನು ಬದಲಾಯಿಸಿ. ಫಾಲಿ ನಾರಿಮನ್ ಒಬ್ಬ ಪಲಾಯನವಾದಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಾವೇರಿ ವಿಚಾರವಾಗಿ ಪರಿಷತ್ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಆದೇಶ ಬಂದ ಬಳಿಕ ಪುಸ್ತಕ ಬಿಸಾಕಿ ಹೋಗಲು ನಾರಿಮನ್ ಅವರೇ ಬೇಕಾ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಪರವಾಗಿ ವಾದ ಮಂಡಿಸಲು ನಮ್ಮಲೇ ಸಾಕಷ್ಟು ಮೇಧಾವಿ ವಕೀಲರಿದ್ದಾರೆ. ಫಾಲಿ ನಾರಿಮನ್ ಒಬ್ಬ ಪಲಾಯನವಾದಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ