ವಿಜಯೇಂದ್ರ ಟಿಕೆಟ್ ಕೈತಪ್ಪಿದ ಹಿಂದೆ ಕೇಂದ್ರವಾಗಲಿ ಅಥವಾ ಆರ್ ಎಸ್ ಎಸ್ ಕೈವಾಡವಿಲ್ಲ. ನಾನೇ ಬೇಡ ಎಂದು ತೀರ್ಮಾನ ಕೈಗೊಂಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕಳೆದ 20 ದಿನಗಳ ಹಿಂದೆ ವರುಣಾ ಕ್ಷೇತ್ರಕ್ಕೆ ಕೆಲಸ ಮಾಡುವಂತೆ ನಾನೇ ನನ್ನ ಮಗ ವಿಜಯೇಂದ್ರನನ್ನ ಕಳುಹಿಸಿದೆ. ಆದರೆ ಈಗ ಟಿಕೆಟ್ ಬೇಡ ಸಾಮಾನ್ಯ ಕಾರ್ಯಕರ್ತನಾಗಿ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಕೆಲಸ ಮಾಡುವಂತೆ ತಿಳಿಸಿದ್ದೇನೆ.
ಸಾಮಾನ್ಯ ಕಾರ್ಯಕರ್ತನಿಗೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವಂತೆ ಹೇಳಿದ್ದೇನೆ. ಟಿಕೆಟ್ ಕೈತಪ್ಪಲು ಕೇಂದ್ರವಾಗಲಿ ಅಥವಾ ಸಂಘ ಪರಿವಾರದ ಕೈವಾಡವಿಲ್ಲ. ದಯವಿಟ್ಟು ನಾವು ಮಾಡಿದ ತಪ್ಪಿಗೆ ವರುಣಾ ಕ್ಷೇತ್ರದ ಜನರಲ್ಲಿ ಕ್ಷಮಿಸುವಂತೆ ಮನವಿ ಮಾಡುತ್ತೇನೆ. ದಯವಿಟ್ಟು ಯಾವುದೇ ಗೊಂದಲ ಮಾಡಬೇಡಿ. ಹೈಕಮಾಂಡ್ ನಾನು ಹೇಳಿದ 95 ಪರ್ಸೆಂಟ್ ಗೆಲ್ಲುವ ಜನರಿಗೆ ಟಿಕೆಟ್ ಕೊಟ್ಟಿದೆ. ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ನಾನೇ ಮುಖ್ಯಮಂತ್ರಿಯಾಗುತ್ತೇನೆ. ವಿಜಯೇಂದ್ರನಿಗೆ ಬೇಸರವಾಗಿಲ್ಲ. ಆದರೆ ಎಲ್ಲವೂ ಸರಿ ಹೋಗುತ್ತದೆ ಎಂದರು.