ಹುಬ್ಬಳ್ಳಿ : ಸ್ಪೀಕರ್ ಬಗ್ಗೆ ಏನು ಮಾತನಾಡಿದ್ದೇನೆಂದು ನನಗೆ ಗೊತ್ತಿದೆ. ಸ್ಪೀಕರ್ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಅವರು ಈ ಬಗ್ಗೆ ಬೇಕಿದ್ರೆ ಹಕ್ಕುಚ್ಯುತಿ ಮಂಡನೆ ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಈವರೆಗೆ ಸರಿಯಾದ ಪರಿಹಾರ ನೀಡಿಲ್ಲ. 10 ಸಾವಿರ ಕೊಟ್ಟಿದ್ದೇವೆ ಅಂತಾರೆ, ಅಲ್ಲೂ ತಾರತಮ್ಯ ಆಗಿದೆ. ಬೆಳೆ ಪರಿಹಾರ ಕೊಟ್ಟಿಲ್ಲವೆಂದು ಆರೋಪಿಸಿದ್ದಾರೆ. ಹಾಗೇ ಮಹಾರಾಷ್ಟ್ರ ,ಹರ್ಯಾಣ ವಿಧಾನಸಭೆ ಚುನಾವಣೆ ವಿಚಾರ ಬಗ್ಗೆ ಮಾತನಾಡಿದ ಅವರು, ಮೋದಿ, ಅಮಿತ್ ಶಾ ಭಾವನಾತ್ಮಕ ವಿಚಾರಗಳನ್ನು ಹೇಳಿದ್ರು. ಆದರೆ ಈ ಬಾರಿ ಭಾವನಾತ್ಮಕ ವಿಚಾರಗಳು ವರ್ಕೌಟ್ ಆಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇಂದು ಡಿಕೆಶಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆ ಡಿಕೆಶಿ ಬೆಂಗಳೂರಿಗೆ ಬರುತ್ತಿದ್ದಾರೆ ಅವರಿಗೆ ಪಕ್ಷ ಸ್ವಾಗತ ಕೋರುತ್ತೆ, ಸದ್ಯಕ್ಕಂತೂ ನನ್ನ ಪ್ರಕಾರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.