Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೈತ ಆತ್ಮಹತ್ಯೆಯ ಹಿಂದೆ ಪುತ್ರನ ಕೈವಾಡ ಆರೋಪ: ಮಾಹಿತಿ ಇಲ್ಲವೆಂದ ಡಿಜಿಪಿ ಓಂ ಪ್ರಕಾಶ್

ರೈತ ಆತ್ಮಹತ್ಯೆಯ ಹಿಂದೆ ಪುತ್ರನ ಕೈವಾಡ ಆರೋಪ: ಮಾಹಿತಿ ಇಲ್ಲವೆಂದ ಡಿಜಿಪಿ ಓಂ ಪ್ರಕಾಶ್
ಮಂಗಳೂರು , ಮಂಗಳವಾರ, 23 ಆಗಸ್ಟ್ 2016 (10:44 IST)
ಮಾಗಡಿಯಲ್ಲಿ ತನ್ನ ಪುತ್ರನ ವಿರುದ್ಧ ಆರೋಪ ಮಾಡಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಕುರಿತ ತನಗೆ ತಡವಾಗಿ ಮಾಹಿತಿ ಲಭ್ಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲವೆಂದು ಡಿಜಿಪಿ ಓಂ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
 
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರ ಕಾರ್ತಿಕೇಶ್ 15 ದಿನಗಳಿಂದ ವಿದೇಶದಲ್ಲಿದ್ದಾನೆ. ಪ್ರಕರಣದ ಕುರಿತು ರಾಮನಗರ ಎಸ್‌ಪಿ ಅವರ ಬಳಿ ಮಾಹಿತಿ ಪಡೆದುಕೊಳ್ಳುತ್ತೇನೆ. ಈ ಕುರಿತು ತಮಗೇನೂ ಗೊತ್ತಿಲ್ಲವೆಂದು ತಿಳಿಸಿದರು.
 
ರೈತ ಶಿವಣ್ಣನ ಕುಟುಂಬದಲ್ಲಿ ಆಸ್ತಿ ಕಲಹ ಉಂಟಾಗಿತ್ತು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರಕರಣದಲ್ಲಿ ಶಿವಣ್ಣನ ವಿರುದ್ಧ ಅಂದರೆ ಆತನ ಸಹೋದರರಾದ ಲೋಕೇಶ್ ಮತ್ತು ನಾರಾಯಣಪ್ಪ ಪರವಾಗಿ ಆಗುವಂತೆ ಡಿಜಿಪಿ ಓಂ ಪ್ರಕಾಶ್  ಪುತ್ರ ಕಾರ್ತೀಕೇಶ್ ಲಾಬಿ ನಡೆಸಿದ್ದ ಎಂದು ಆರೋಪಿಸಲಾಗಿತ್ತು.
 
ವಿವಾದಿತ ಜಮೀನಿನಲ್ಲಿ ಕಾರ್ತಿಕೇಶ್ ಜಲ್ಲಿ ಕ್ರಷರ್ ವ್ಯವಹಾರ ನಡೆಸುತ್ತಿದ್ದರು. ಹೀಗಾಗಿ ತಮ್ಮ ತಂದೆಯ ಪ್ರಭಾವ ಬಳಸಿ ನನಗೆ ಆಸ್ತಿ ದೊರೆಯದಂತೆ ಮಾಡಿದ್ದಾರೆ. ನನ್ನ ಸಾವಿಗೆ ಡಿಜಿಪಿ ಪುತ್ರ ಕಾರ್ತಿಕೇಶ್ ಮತ್ತು ಕೆಲ ಅಧಿಕಾರಿಗಳು ಕಾರಣ ಎಂದು ಹೇಳಿ ವಿಡಿಯೋ ಮಾಡಿ ಶಿವಣ್ಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೂರು ದಿನದ ಹಿಂದೆ ವಿಷ ಕುಡಿದಿದ್ದ ಅವರು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರಿಂದ ಬಿಜೆಪಿ ನಾಯಕನ ಪುತ್ರನ ಅಪಹರಣ