ಕೋಲ್ಕತ್ತಾ: ಜೆಡಿಎಸ್ ನ ಶಾಸಕರು ರಾಜೀನಾಮೆ ಕೊಡ್ತಾರೆಂಬ ಸುದ್ದಿಯಿದ್ದು, ಇದರ ಹಿಂದಿನ ಮಾಸ್ಟರ್ ಮೈಂಡ್ ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ಎಂಬ ಸುದ್ದಿ ಕೇಳಿ ಬಂದ ಹಿನ್ನಲೆಯಲ್ಲಿ ಇದೀಗ ಹೆಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜೀನಾಮೆಗೆ ನಾನು ಮಾಸ್ಟರ್ ಮೈಂಡ್ ಅನ್ನೋದು ಸುಳ್ಳು, ಶಾಸಕರ ರಾಜೀನಾಮೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಜೆಡಿಎಸ್ ನ ಶಾಸಕರು ರಾಜೀನಾಮೆ ಕೊಡ್ತಾರೆಂಬ ಸುದ್ದಿಯಿದೆ. 4-5 ಶಾಸಕರು ರಾಜೀನಾಮೆ ಕೊಡುವ ಸುದ್ದಿ ಕಿವಿಗೆ ಬಿದ್ದಿದೆ.
ಇದು ಎಷ್ಟು ನಿಜ ಗೊತ್ತಿಲ್ಲ, ನಾನಂತೂ ರಾಜೀನಾಮೆ ಕೊಡಲ್ಲ ಎಂದು ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ಅವರು ಇಂದು ಬೆಳಿಗ್ಗೆ ಕೆಐಎಎಲ್ ನಿಂದ ಕೋಲ್ಕತ್ತಾಕ್ಕೆ ಹಾರಿದ್ದು, ಅಲ್ಲಿ ಕಾಳಿ ದೇವಿದರ್ಶನಕ್ಕೆ ತೆರಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.