ನನ್ನ ವಿರುದ್ದದ ಹಳೆಯ ಕೇಸ್‌ಗಳಿಗೆ ಮತ್ತೆ ಜೀವ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿ ನನ್ನನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇಂತಹ ಪೊಳ್ಳು ಬೆದರಿಕೆಗಳಿಗೆ ಬಗ್ಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ಯಾವುದೇ ಪ್ರಕರಣವನ್ನು ರೀ ಓಪನ್ ಮಾಡಲಿ ನಾನು ಹೆದರುವುದಿಲ್ಲ. ನ್ಯಾಯಾಲಯವೇ ನನ್ನನ್ನು ದೋಷಮುಕ್ತ ಎಂದು ತೀರ್ಪು ನೀಡಿದೆ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆ,ಸ್ ಸರಕಾರದ ಇಂತಹ ಬೆದರಿಕೆಗಳಿಗೆ ನಾನು ಜಗ್ಗಲ್ಲ, ಬಗ್ಗಲ್ಲ, ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ 65 ಕೋಟಿ ರೂಪಾಯಿ ಸಂದಾಯವಾಗಿರುವುದು ಡೈರಿಯಲ್ಲಿ ನಮೂದಾಗಿದೆ. ಸಿಎಂಗೆ ತಾಕತ್ತಿದ್ರೆ ಡೈರಿ ಪ್ರಕರಣವನ್ನು ಸಿಬಿಐಗೆ ವಹಿಸಲಿ
ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಲು ಸಿದ್ದರಾಗಲಿ. ಅವರು ರಾಜೀನಾಮೆ ನೀಡಿದರೂ ನನಗೆ ಸಮಾಧಾನವಾಗುವುದಿಲ್ಲ. ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಸಿಎಂ ಕುಟುಂಬಕ್ಕೆ 65 ಕೋಟಿ ರೂಪಾಯಿ ಹೋಗಿರುವುದರಿಂದ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ ಮಾತ್ರ ನನಗೆ ಸಮಾಧಾನವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.