Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗುಂಡಿಟ್ಟು ಹೊಡಿಯುವ ಹೇಳಿಕೆಗೆ ಈಗಲೂ ಬದ್ಧ: ಮುತಾಲಿಕ್

ಗುಂಡಿಟ್ಟು ಹೊಡಿಯುವ ಹೇಳಿಕೆಗೆ ಈಗಲೂ ಬದ್ಧ: ಮುತಾಲಿಕ್
bengaluru , ಬುಧವಾರ, 8 ಜೂನ್ 2022 (18:06 IST)

ಹುಬ್ಬಳ್ಳಿ: ಸುಪ್ರೀಂಕೋರ್ಟ್ ನಿಯಮ ಪಾಲಿಸದೆ ಇರುವವರ ಮೇಲೆ ಗುಂಡಿಟ್ಟು ಹೊಡಿಯೋ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪುನರುಚ್ಚಾರ ಮಾಡಿದ್ದಾರೆ.
ಕೇಶ್ವಾಪೂರ ಮಧುರಾ ಕಾಲೋನಿಯಲ್ಲಿರುವ ಜಗದೀಶ್ ಮನೆ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂಕೋರ್ಟ್ ನಿಯಮ ಪಾಲನೆ ಮಾಡೋಕೆ ಆಗಿಲ್ಲಾಂದ್ರೆ ರಾಜಿನಾಮೆ ಕೊಡಿ. ನನ್ನ ಕೈಗೆ ಅಧಿಕಾರ ಕೊಟ್ಟು ನೋಡಿ ಯಾರು ಕಾನೂನು ಪಾಲನೆ ಮಾಡಲು ಅವರಿಗೆ ಗುಂಡ್ಲಪೇಟೆ ಗತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ನಮ್ಮಂತಹ ಸಂಘಟನೆಗಳ ಶ್ರಮದಿಂದಲೇ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ಕೊಡಲೆಂದೇ ಇವತ್ತು ಹೋರಾಟ ಮಾಡ್ತಿದ್ದೇವೆ. ಧ್ವನಿವರ್ಧಕ ವಿಚಾರದಲ್ಲಿ ಸುಪ್ರಿಂಕೋರ್ಟ್ ಆದೇಶ ನೀಡಿ 15ವರ್ಷಗಳಾಗಿದೆ. ಆದರೆ ಸುಪ್ರೀಂಕೋರ್ಟ್ ಆದೇಶ ಇನ್ನೂ ಜಾರಿಯಾಗ್ತಿಲ್ಲ. ನೀವು ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ನಿಮ್ಮ ಮನೆಗಳ ಮುಂದೆಯೇ ಭಜನೆ ಆರಂಭಿಸುತ್ತೇವೆ ಎಂದರು.
ಬಿಜೆಪಿ ಶಾಸಕರು ಮತ್ತು ಅಧ್ಯಕ್ಷರ ಮನೆ ಮುಂದೆಯೇ ಮೈಕ್ ಇಟ್ಟುಕೊಂಡು ಭಜನೆ ನಡೆಸುತ್ತೇವೆ. ಬರೀ ಹಿಂದೂಗಳ ವೋಟ್ ತೆಗೆದುಕೊಳ್ಳುವುದು ಮಾತ್ರ ಅಲ್ಲ .ಹಿಂದೂಗಳ ಸಮಸ್ಯೆಯನ್ನು ಅರಿತು ಕೊಳ್ಳಬೇಕು ಎಂದರು.
ಯೋಗಿ ಆದಿತ್ಯನಾಥನ ರೀತಿಯಲ್ಲಿ ಬಸವರಾಜ ಬೊಮ್ಮಾಯಿಯವರು ಗಟ್ಟಿಯಾಗಿ ನಿಲ್ಲಬೇಕು. ಅದರ ಬದಲಿಗೆ ಇದೇ ರೀತಿಯ ನಾಟಕ ಮಾಡಿದ್ರೆ ಸುಮ್ಮನೆ ಇರುವುದಿಲ್ಲ. ಕಣ್ಣೀರು ಒರೆಸುವ ತಂತ್ರಗಾರಿಕೆ ಬಿಡಬೇಕು ಎಂದು ಕಿಡಿಕಾರಿದರು.
ನಿಮ್ಮ ಕೈಲಿ ಆಗದೇ ಇದ್ದಲ್ಲಿ ರಾಜೀನಾಮೆ ಕೊಡಿ. ನನಗೆ ಅಧಿಕಾರ ಕೊಡಿ 24 ಗಂಟೆಯಲ್ಲಿ ಅದನ್ನು ಮಾಡಿ ತೋರಿಸುತ್ತೇನೆ. ಪಾಲಿಸದೆ ಇದ್ದವರ ಮೇಲೆ ಗುಂಡು ಹಾರಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಮನೆಯಲ್ಲಿ ಪಾಯಸ ಸೇವಿಸಿ 23 ಮಂದಿ ಅಸ್ವಸ್ಥ