ತನ್ನ ಹೆಂಡತಿಯ ರುಂಡ ಕಟ್ ಮಾಡಿದ ವಿಕೃತ ಮನಸ್ಸಿನ ಗಂಡನೊಬ್ಬ ಅದನ್ನು ಪೊಲೀಸರಿಗೆ ತಂದು ಕೊಟ್ಟಿದ್ದಾನೆ.
ಅಖಿಲೇಶ್ ರಾವತ್ ಕೊಲೆ ಆರೋಪಿಯಾಗಿದ್ದು, ಜಗಳ ನಡೆದ ಬಳಿಕ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಆ ಬಳಿಕ ಆಕೆಯ ರುಂಡ ಕತ್ತರಿಸಿ ಅದನ್ನು ಕೈಯಲ್ಲೇ ಹಿಡಿದುಕೊಂಡು ಬಂದು ಪೊಲೀಸರಿಗೆ ಕೊಟ್ಟಿದ್ದಾನೆ.
ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ನಡೆಸಿದ ಕೃತ್ಯದಿಂದಾಗಿ ಬಹದ್ದೂರಪರ್ ಹಳ್ಳಿಯ ಜನರು ಭಯಗೊಂಡಿದ್ದಾರೆ. ಕೊಲೆಗಡುಕನನ್ನು ಪೊಲೀಸರು ಬಂಧನ ಮಾಡಿದ್ದಾರೆ.