ಮಹಿಳೆಯೊಬ್ಬರಲ್ಲಿ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದರೆ, ಆಕೆಯ ಗಂಡ ಮಹಾಮಾರಿ ರೋಗಕ್ಕೆ ಸಾವನ್ನಪ್ಪಿದ್ದಾನೆ.
ವಿಜಯಪುರ ನಗರದಲ್ಲಿ ಕೊರೊನಾ ಸೋಂಕಿತ ಮಹಿಳೆಯ ರೋಗಿ ಸಂಖ್ಯೆ 221 ಅವರ ಕೊರೊನಾ ಲಕ್ಷಣ ಹೊಂದಿದ್ದ ಪತಿ ಮರಣಹೊಂದಿದ್ದಾರೆ.
ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಅವರು ಈ ವಿಷಯ ತಿಳಿಸಿದ್ದಾರೆ. ಈಗಾಗಲೇ ಕಳುಹಿಸಿದ್ದ ಮೃತನ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಆದರೆ ಮೃತನಲ್ಲಿ ಕೊರೊನಾ ಲಕ್ಷಣಗಳಿದ್ದವು ಎಂದು ಡಿಸಿ ಹೇಳಿದ್ದಾರೆ.