ಪತ್ನಿ ಪರ ಪುರುಷನನ್ನ ನೋಡಬಾರದೆಂದು ಪಾಪಿ ಪತಿ ಪತ್ನಿಯ ಕಣ್ಣನ್ನೇ ಕಿತ್ತು ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರಿನ ನಾಗೇನಹಳ್ಳಿಯಲ್ಲಿ ನಡೆದಿದೆ.
ಒಡಿಶಾ ರಾಜ್ಯದ ಮುನ್ನಾ ಎಂಬಾತ ಈ ಹೀನ ಕೃತ್ಯ ನಡೆಸಿದ್ದಾನೆ. ಹೆಂಡತಿ ಜೊತೆ ಜಗಳ ತೆಗೆದ ಮುನ್ನಾ ದೊಣ್ಣೆಯಿಂದ ತಲೆಗೆ ಹೊಡೆದಾಗ
ಕಣ್ಣಿಗೆ ಬಿದ್ದು ಗುಡ್ಡೆ ಹೊರಗೆ ಬಂದಿದೆ ಎಂದು ಆರೋಪಿಸಲಾಗಿದೆ.
ಎರಡು ವಾರಗಳ ಹಿಂದಷ್ಟೇ ಪತ್ನಿ ಜೊತೆ ಇಲ್ಲಿಗೆ ಬಂದಿದ್ದ ಮುನ್ನಾ ದಂಪತಿ, ಅಪಾರ್ಟ್`ಮೆಂಟ್ ಕಟ್ಟುವ ಕೂಲಿ ಕೆಲಸಕ್ಕೆ ಸೇರಿದ್ದರು. ಅನ್ಯೋನ್ಯವಾಗಿಯೇ ಇದ್ದ ದಂಪತಿ ನಡುವೆ ವಿರಸ ಮೂಡಿ ದುರಂತದಲ್ಲಿ ಅಂತ್ಯವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕೊತ್ತನೂರು ಪೊಲೀಸರು ತಲೆಮರೆಸಿಕೊಮಡಿರುವ ಮುನ್ನಾಗಾಗಿ ಹುಡುಕಾಟ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ