ನಗರದ ಸುಂಕದಕಟ್ಟೆಯಲ್ಲಿ ಪತಿಯಿಂದ ಪತ್ನಿ ಕೊಲೆ (Murder) ನಡೆದಿದೆ. ಪತಿ ಯೋಗೀಶ್ನಿಂದ ಪತ್ನಿ ಸೌಮ್ಯ ಕೊಲೆಯಾಗಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದಂಪತಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಗಂಡ- ಹೆಂಡತಿ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಹಣಕಾಸು ವಿಚಾರಕ್ಕೆ ಹಲವಾರು ಬಾರಿ ಗಲಾಟೆ ಮಾಡಿಕೊಂಡಿದ್ದರು. ವರದಕ್ಷಿಣೆ (Dowry) ಹಣ ತರುವಂತೆ ಗಂಡ ಪೀಡಿಸುತ್ತಿದ್ದನಂತೆ. ಹೀಗಾಗಿ ಸೌಮ್ಯ ತವರು ಮನೆಯಿಂದ ಎರಡು ಬಾರಿ ಹಣ ತಂದು ಕೊಟ್ಟಿದ್ದಳಂತೆ.
ಡ್ರೈವಿಂಗ್ ಕೆಲಸ ಮಾಡುತ್ತಿರುವ ಪತಿ ಯೋಗೀಶ್ ಇನ್ನೂ ಹಣ ಬೇಕು ಅಂತ ಮೂರು ದಿನಗಳ ಹಿಂದೆ ಹೆಂಡತಿ ಜೊತೆ ಗಲಾಟೆ ಮಾಡಿದ್ದಾನೆ. ಎರಡು ಲಕ್ಷ ಹಣ ತೆಗೆದುಕೊಂಡು ಬಾ ಎಂದು ಕಿರಿಕ್ ಮಾಡಿದ್ದಾನೆ. ನಿನ್ನೆ ಸಂಜೆ ಮನೆಯಲ್ಲಿ ಮತ್ತೆ ಜಗಳ ಮಾಡಿ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.ಕೊಲೆಗೆ ಸಂಚು:
ಪತ್ನಿಗೆ ಪದೇ ಪದೇ ಕರೆ ಮಾಡಿ ಹಿಂಸೆ ನೀಡುತ್ತಿದ್ದವನ ಕೊಲೆಗೆ ರೌಡಿ ಶೀಟರ್ ಹಾಗು ಆತನ ನಾಲ್ವರು ಸಹಚರರು ಸಂಚು ರೂಪಿಸಿದ್ದರು. ಸದ್ಯ ಆರೋಪಿಗಳಾದ ಅರುಣ್ ಕುಮಾರ್ ಅಲಿಯಾಸ್ ನಾಯ್ಡು, ಯಶವಂತ್, ಕಾರ್ತಿಕ್, ವಿಶಾಲ್, ಸಂಜಯ್ನ ಪೊಲೀಸರು ಬಂಧಿಸಿದ್ದಾರೆ ಮಂಜುಶ್ರೀಗೆ ಶ್ರೀಕಾಂತ್ ಎಂಬುವವನು ಕರೆ ಮಾಡಿದ್ದ. ಶ್ರೀಕಾಂತ್ ಈ ಹಿಂದೆ ಮಂಜುಶ್ರೀ ಜೊತೆ ವಾಸವಾಗಿದ್ದ. ಈಗ ಅರುಣ್ ಜೊತೆ ವಾಸವಿರುವ ಮಂಜುಶ್ರೀಗೆ ಶ್ರೀಕಾಂತ್ ತಡ ರಾತ್ರಿ ಕರೆ ಮಾಡಿದ್ದ. ಈ ವಿಚಾರಕ್ಕೆ ಕೋಪಗೊಂಡಿದ್ದ ಆರುಣ್, ಕೊಲೆ ಮಾಡಲು ರೂಪಿಸಿದ್ದ.
ಪೌರಾಯುಕ್ತರಿಗೆ ಕೊಲೆ ಬೆದರಿಕೆ ಆರೋಪಿಗೆ ಜೈಲು ಶಿಕ್ಷೆ:
ಚಾಮರಾಜನಗರ: ಪೌರಾಯುಕ್ತರಿಗೆ ಕೊಲೆ ಬೆದರಿಕೆ ಹಾಕಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಚಾಮರಾಜನಗರ ನಗರ ಸಭಾ ಸದಸ್ಯನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಆರ್.ಪಿ.ನಂಜುಂಡಸ್ವಾಮಿ ಶಿಕ್ಷೆಗೊಳಗಾದ ನಗರಸಭಾ ಸದಸ್ಯ. 1 ವರ್ಷ ಜೈಲು ಶಿಕ್ಷೆ, 5 ಸಾವಿರ ರೂ ದಂಡ ವಿಧಿಸಲಾಗಿದೆ. ಚಾಮರಾಜನಗರ ಪ್ರಧಾನ ಸಿಜೆ ಹಾಗು ಜೆಎಂಎಫ್‌ಸಿ ನ್ಯಾ. ಮೊಹಮ್ಮದ್ ರೋಷನ್ ಷಾ ತೀರ್ಪು ನೀಡಿದ್ದಾರೆ. 2010 ರ ನವೆಂಬರ್ 10 ರಂದು ಘಟನೆ ನಡೆದಿತ್ತು. ನಂಜುಂಡಸ್ವಾಮಿ ಅಂದಿನ ಪೌರಾಯುಕ್ತ ಪ್ರಕಾಶ್ ಅವರಿಗೆ ಕೊಲೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದ. ಆರೋಪ ಸಾಬೀತಾದ ಹಿನ್ನೆಲೆ ಐಪಿಸಿ ಸೆಕ್ಷನ್ 353, 594,506 ಅನ್ವಯ ಶಿಕ್ಷೆ ನೀಡಲಾಗುತ್ತಿದೆ.