ಬೆಳಗಾವಿ : ಪತ್ನಿ ತವರು ಮನೆಯಿಂದ ಬಾರದಿದ್ದಕ್ಕೆ ಕೋಪಗೊಂಡ ಪತಿ ಆಕೆಯ ತುಟಿ, ಮೂಗನ್ನು ಕತ್ತರಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದಿದೆ.
ಮಹಾರಾಷ್ಟ್ರದ ಶಿರೋಳ ತಾಲೂಕಿನ ಶೆಡಶ್ಯಾಳ ಗ್ರಾಮದ ನಿವಾಸಿ ಸುರೇಶ್ ಪರಶುರಾಮ್ ನಾಯಿಕ್ ಇಂತಹ ಕೃತ್ಯ ಎಸಗಿದ ಪತಿಯಾಗಿದ್ದು, ಸುನಿತಾ ಸುರೇಶ್ ನಾಯಿಕ್ ಹಲ್ಲೆಗೊಳಗಾದ ಪತ್ನಿ. ತವರು ಮನೆಗೆ ಹೋಗಿದ್ದ ಪತ್ನಿ ಸುನೀತಾ ಗಂಡನ ಮನೆಗೆ ವಾಪಾಸ್ಸು ಬರಲಿಲ್ಲ. ಈ ಕಾರಣಕ್ಕೆ ಕೋಪಗೊಂಡ ಪತಿ ಸುರೇಶ್ ಪತ್ನಿಯ ಮನೆಗೆ ಹೋಗಿ ಆಕೆಯ ತುಟಿ, ಮೂಗನ್ನು ಕತ್ತರಿಸಿ ಪರಾರಿಯಾಗಿದ್ದಾನೆ.
ಈ ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ