ಒಂದೆಡೆ ಬಿಯರ್ ಮೇಲಿನ ಸುಂಕವನ್ನು ರಾಜ್ಯ ಸರಕಾರ ಬಜೆಟ್ ನಲ್ಲಿ ಹೆಚ್ಚಿಸಿದ್ದರೆ, ಇನ್ನೊಂದೆಡೆ ಬಿಯರ್ ನಾಶಪಡಿಸಿರುವ ಘಟನೆ ನಡೆದಿದೆ.
ಅಕ್ರಮ ಮದ್ಯ ಮಾರಾಟದಲ್ಲಿ ವಶಪಡಿಸಿಕೊಳ್ಳಲಾದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನಾಶಪಡಿಸಿದ್ದಾರೆ.
ಮೈಸೂರು ಜಿಲ್ಲೆಯ 16 ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾಗಿದ್ದ ಮದ್ಯವನ್ನು ನಾಶಮಾಡಲಾಗಿದೆ.
ಸುಮಾರು 1.5 ಲಕ್ಷ ಮೌಲ್ಯದ, ವಿವಿಧ ಬ್ರ್ಯಾಂಡ್ ಗಳ 133 ಲೀ. ಮದ್ಯ, 62.250 ಲೀಟರ್ ಬಿಯರ್ ನಾಶಪಡಿಸಲಾಗಿದೆ.
ಮೈಸೂರಿನ ನಜರ್ ಬಾದ್ ಅಬಕಾರಿ ನಿರೀಕ್ಷಕರ ಕಾರ್ಯಾಲಯದ ಮುಂಭಾಗದಲ್ಲಿ ಅಕ್ರಮ ಮದ್ಯ ನಾಶಪಡಿಸಿದ ಇಲಾಖೆಯವರು, ಇದನ್ನು ಚುನಾವಣೆ ಸಂದರ್ಭ ಸೇರಿದಂತೆ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ವೇಳೆ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದರು.
ಎಕ್ಸೈಜ್ ಡೆಪ್ಯುಟಿ ಸೂಪರಿಡೆಂಟೆಂಟ್ ತಮ್ಮಣ್ಣ, ಅಬಕಾರಿ ಆರಕ್ಷಕ ನಿರೀಕ್ಷಕ ಮಂಜುನಾಥ್ ನೇತೃದಲ್ಲಿ ಮದ್ಯ ನಾಶ ಮಾಡಲಾಯಿತು.