ಬೆಂಗಳೂರು : ಭಾರತೀಯ ಕುಶಲಕರ್ಮಿಗಳು ಮತ್ತು ನೇಕಾರರು ತಮ್ಮ ಸಾಂಪ್ರದಾಯಿಕ ಕಲೆ ಮತ್ತು ಜೀವನೋಪಾಯವನ್ನು ಕಾಪಾಡಿಕೊಳ್ಳಲು ಭಾರೀ ಹೋರಾಟವನ್ನು ನಡೆಸುತ್ತಿದ್ದಾರೆ. ಸದ್ಯಕ್ಕೆ ತಾವು ಉತ್ಪಾದಿಸಿದ ವಸ್ತುಗಳ ಮಾರಾಟದಲ್ಲಿ ಭಾರೀ ಏರಿಕೆ ಕಾಣುತ್ತಿರುವುದಕ್ಕೆ ಆನ್ಲೈನ್ ಪ್ಲಾಟ್ಫಾರ್ಮ್ಗಳಿಗೆ ಋಣಿಯಾಗಿದ್ದಾರೆ.
ಉದಾಹರಣೆಗೆ, ನಶಿಸುತ್ತಿರುವ ಕರಕುಶಲ ಕಲೆಯನ್ನು ಜೀವಂತವಾಗಿ ಇರಿಸಲು ಡಿಜಿಟಲ್ನ ಶಕ್ತಿಯನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ ಸ್ಥಳೀಯ ಮಾರಾಟಗಾರ ಅದಿಲ್. ಶತಮಾನದ ಹಳೆಯ ಅವರ ಕುಟುಂಬ ನಿಯಂತ್ರಿತ ವ್ಯಾಪಾರ ಚನ್ನಪಟ್ಟಣ ಆಟಿಕೆಗಳು ಹಲವಾರು ಸ್ಥಳೀಯ ಕುಶಲಕರ್ಮಿಗಳ ಮೇಲೆ ಪರಿಣಾಮ ಬೀರುತ್ತವೆ. ನನ್ನೊಂದಿಗೆ ಸುಮಾರು 35 ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಕೆಲವರು 40 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು 60 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆನ್ಲೈನ್ ಪ್ಲಾಟ್ಫಾರ್ಮ್ಗಳು ಈ ಕುಶಲಕರ್ಮಿಗಳಿಗೆ ಜೀವನೋಪಾಯದ ಪ್ರಮುಖ ಮೂಲವಾಗಿವೆ. ಈ ಸೌಲಭ್ಯಗಳು ನನ್ನ ತಂದೆ ಮತ್ತು ತಾತನಿಗೆ ಇರಲಿಲ್ಲ. ಆದರೆ ಇಂದು ನಾನು ಕಡಿಮೆ ಹೂಡಿಕೆಯೊಂದಿಗೆ ಖರೀದಿದಾರರ ಜೊತೆಗೆ ತೊಡಗಿಸಿಕೊಳ್ಳಲು ಮತ್ತು ದೊಡ್ಡ ಪರಿಣಾಮ ರೂಪಿಸಲು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಶಕ್ತಿಯನ್ನು ಬಳಸಿಕೊಳ್ಳಬಹುದು. ನಮ್ಮ ಭವ್ಯವಾದ ಕರಕುಶಲ ಪರಂಪರೆ ಸಂರಕ್ಷಿಸುವ ಜೊತೆಗೆ ವ್ಯಾಪಾರವನ್ನು ಹೆಚ್ಚಿಸಲು ಮತ್ತು ಈ ವಿಶಿಷ್ಟ ಚನ್ನಪಟ್ಟಣದ ಆಟಿಕೆಗಳನ್ನು ಭಾರತದಿಂದ ಜಗತ್ತಿಗೆ ಲಭ್ಯವಾಗುವಂತೆ ಮಾಡಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.