ಕೋಟಿ ಕೋಟಿ ನಷ್ಟದಲ್ಲಿ ಬಿಎಂಟಿಸಿ ಸಂಸ್ಥೆ ಇರೋವಾಗಲೇ ಮತ್ತೆ ಬಸ್ ದರ ಹೆಚ್ಚು ಮಾಡೋ ಕುರಿತು ಸುದ್ದಿಗಳು ಹರಿದಾಡಲಾರಂಭಿಸಿವೆ.
ಈ ನಡುವೆ ಪ್ರಯಾಣಿಕರಿಗೆ ಹೊರೆ ಆಗಬಾರದು ಅನ್ನೋ ಕಾರಣಕ್ಕೆ ಬಸ್ ದರ ಹೆಚ್ಚಿಗೆ ಮಾಡ್ತಾ ಇಲ್ಲ. ಹೀಗಂತ ಉಪಮುಖ್ಯಮಂತ್ರಿಯೂ ಆಗಿರೋ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಾರಿಗೆ ಇಲಾಖೆಯಲ್ಲಿರೋ ಲೋಪದೋಷಗಳನ್ನು ಸರಿ ಮಾಡಲಾಗ್ತಿದೆ. ಒಂದಷ್ಟು ಬದಲಾವಣೆಗಳನ್ನೂ ಮಾಡ್ತೇವೆ. ಇಲಾಖೆಯ ಕೆಲವು ವಿಭಾಗಗಳು ನಷ್ಟದಲ್ಲಿವೆ ಅಂತ ಹೇಳಿದ್ದಾರೆ.
ದೇಶದಲ್ಲಿ ಒಂದೇ ಮಾದರಿಯ ಸಾರಿಗೆ ನಿಯಮ ಜಾರಿಗೆ ತರೋ ಚಿಂತನೆ ನಡೆಯುತ್ತಿದೆ ಅಂತ ಲಕ್ಷ್ಮಣ ಸವದಿ ಹೇಳಿದ್ದಾರೆ.