ಆಯಾ ತಪ್ಪಿ ರೈಲ್ವೇ ಬ್ರಿಡ್ಜ್ ಕಾಮಗಾರಿಗಾಗಿ ತಗೆದ ಗುಂಡಿಯಲ್ಲಿ ಬಿದ್ದು ವ್ಯಕ್ತಿಯೊಬ್ಬ ಅರ್ಧ ಗಂಟೆಗೂ ಹೆಚ್ಚು ಕಾಲ ಜೀವನ್ಮರಣದ ನಡುವೆ ಹೋರಾಡಿ ಬದುಕುಳಿದ ಘಟನೆ ನಡೆದಿದೆ.
ಆಯಾ ತಪ್ಪಿ ರೈಲ್ವೇ ಬ್ರಿಡ್ಜ್ ಕಾಮಗಾರಿಗಾಗಿ ತಗೆದ ಗುಂಡಿಯಲ್ಲಿ ಬಿದ್ದು ವ್ಯಕ್ತಿ ನರಳಾಡಿದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದ ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ. ಆನಂದ ನಗರದ ನಿವಾಸಿ ಅಲ್ತಾಫ್ (30)ಗುಂಡಿಗೆ ಬಿದ್ದು ನರಳಾಡಿದ ವ್ಯಕ್ತಿ. ರೈಲ್ವೆ ಬ್ರಿಡ್ಜ ಕಾಮಗಾರಿಗೆ ದೊಡ್ಡದಾದ ಗುಂಡಿ ತಗೆದು ಬಿಡಲಾಗಿದೆ. ಗುಂಡಿಗೆ ಆಯತಪ್ಪಿ ಬಿದಿದ್ದಾನೆ.
ಗುಂಡಿಯಲ್ಲಿ ಬಿದ್ದು ಸಹಾಯ ಮಾಡುವಂತೆ ಚೀರಾಡಿದ್ದಾನೆ. ಅಲ್ತಾಫ್ ಚೀರಾಟ, ಕೂಗಾಟ ಕೇಳಿದ ಸ್ಥಳೀಯರು ಗುಂಡಿಗೆ ಬಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಆಳವಾದ ಗುಂಡಿಗೆ ಬಿದ್ದ ಅಲ್ತಾಫ್ ಗೆ ಗಾಯವಾಗದೆ, ಅದೃಷ್ಟವಶಾತ್ ಸ್ಥಳೀಯರ ಸಹಾಯದಿಂದ ಬದುಕಿ ಬಂದಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ವ್ಯಕ್ತಿಯ ಪ್ರಾಣ ಉಳಿದಿದೆ. ಕಾಮಗಾರಿ ಸ್ಥಳದಲ್ಲಿ ಯಾವುದೇ ಸೂಚನೆ ಫಲಕ ಇಲ್ಲದಿರುವುದೇ ಈ ಅವಾಂತರಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಮುಂದಾದರೂ ಸೂಚನಾ ಫಲಕ ಹಾಕುವಂತೆ ಒತ್ತಾಯಿಸಿದ್ದಾರೆ.