ಜಿಮ್ಸ್ ವೈದ್ಯಕೀಯ ಕಾಲೇಜಿನ 20 ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಆ ಸೋಂಕು ತಗಲಿದ್ದು, ವಿದ್ಯಾರ್ಥಿನಿಯರನ್ನು ಜಿಮ್ಸ್ ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಲಬುರಗಿಯಲ್ಲಿ ಜಿಮ್ಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯದ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಡಿಫ್ತಿರಿಯಾ ಸೋಂಕು ತಗುಲಿದೆ. ಹೀಗಂತ ಜಿಮ್ಸ್ ವೈದ್ಯಕೀಯ ನಿರ್ದೇಶಕರು ಹೇಳಿದ್ದಾರೆ.
ಗಂಟಲು, ಶ್ವಾಸನಾಳ ನೋವು ಮತ್ತು ಜ್ವರದಿಂದ ವಿದ್ಯಾರ್ಥಿನಿಯರು ಬಳಲುತ್ತಿದ್ದಾರೆ. ಡಿಫ್ತಿರಿಯಾ ಸೋಂಕು ಶಂಕೆ ವ್ಯಕ್ತವಾಗಿದ್ದು, ಶಂಕಿತ ವಿದ್ಯಾರ್ಥಿನಿಯರ ಸಂಬಂಧಿಸಿದ ಮಾದರಿಯನ್ನು ಕಳಿಸಲಾಗಿದೆ.
ಬೆಂಗಳೂರಿನ ಬಿಎಂಸಿಆರ್ ಐ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.