ಬೆಂಗಳೂರು : ಹೆಚ್ಚಿನ ಹೆಣ್ಣುಮಕ್ಕಳು ಮದುವೆಯಾಗಿ ಒಂದು ಮಗುವಾದ ಮೇಲೆ ಮಗುವಿನ ಆರೈಕೆಯಲ್ಲಿ ತುಂಬಾ ಬ್ಯುಸಿಯಾಗಿ ಬಿಡುತ್ತಾರೆ. ಅವರಿಗೆ ಪತಿಯ ಜೊತೆ ರೊಮ್ಯಾನ್ಸ್ ಮಾಡಲು ಸಮಯವಿರುವುದಿಲ್ಲ. ಇದರಿಂದ ನಿಮ್ಮ ದಾಂಪತ್ಯ ಜೀವನ ಬೇಸರವನ್ನುಂಟುಮಾಡಬಹುದು. ಆದ್ದರಿಂದ ಅಮ್ಮನಾದ ಮೇಲೂ ಪತಿಯ ಜೊತೆ ರೊಮ್ಯಾಂಟಿಕ್ ಆಗಿ ಇರುವುದು ಹೇಗೆಂಬುದಕ್ಕೆ ಇಲ್ಲಿದೆ ಸಲಹೆ.
*ಮಗುವಿಗೆ ಸಾಧ್ಯವಾದಷ್ಟು ಬೇಗ ನಿದ್ರೆ ಮಾಡಿಸಿ. ಇದರಿಂದ ಮಕ್ಕಳ ಆರೋಗ್ಯವೂ ಉತ್ತಮವಾಗಿರುತ್ತದೆ. ಮಗು ಬೇಗನೆ ಮಲಗಿದರೆ ದಂಪತಿ ಸುಖ ದುಃಖ ಹಂಚಿ ಕೊಳ್ಳಲು, ರೊಮ್ಯಾನ್ಸ್ ಮಾಡಲು ಎಲ್ಲದಕ್ಕೂ ಸಮಯ ಸಿಗುತ್ತದೆ. ಇದರಿಂದ ದಂಪತಿ ವೈವಾಹಿಕ ಜೀವನವೂ ಉತ್ತಮವಾಗಿರಲು ಸಹಾಯವಾಗುತ್ತದೆ.
* ಮಗು ದೊಡ್ಡದಾಗಿದ್ದರೆ ಅವರಿಗಾಗಿ ಬೇರೆ ರೂಮ್ ಮಾಡಿ. ಇದರಿಂದ ನಿಮಗೆ ಪ್ರೈವೇಸಿ ಸಿಗುತ್ತದೆ.
* ವಾರದಲ್ಲಿ ಒಂದು ಬಾರಿಯಾದರೂ ಪತಿ-ಪತ್ನಿ ಜೊತೆಯಾಗಿ ಎಲ್ಲಾದರೂ ಹೊರಗೆ ಹೋಗಿ. ಇದನ್ನು ಜೀವನದ ಕೊನೆಯವರೆಗೂ ಮುಂದುವರೆಸಿಕೊಂಡು ಹೋದರೆ ಉತ್ತಮ.
* ಆಗಾಗ ಸಂಗಾತಿಗೆ ಗಿಫ್ಟ್ ಕೊಡಲು ಮರೆಯಬೇಡಿ. ಗಿಫ್ಟ್ ಕೊಡುತ್ತ ಹೋದರೆ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.