ನವಜಾತ ಶಿಶುವಿನ ತಲೆಯನ್ನು ಕಡಿದು ಮಹಿಳೆಯ ಗರ್ಭದೊಳಗೆ ಬಿಟ್ಟ ಆಘಾತಕಾರಿ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಆಸ್ಪತ್ರೆಯೊಂದರಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಹೆರಿಗೆಗೆಂದು ಬಂದ 32 ವರ್ಷ ಹಿಂದೂ ಮಹಿಳೆಯ ಶಸ್ತ್ರಚಿಕಿತ್ಸೆ ವೇಳೆ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.
ಸಿಂಧ್ ಸರಕಾರ ಈ ಘಟನೆಯ ಮಾಹಿತಿ ಪಡೆಯುತ್ತಿದ್ದಂತೆ ಇಡೀ ಪ್ರಕರಣದ ತನಿಖೆಗೆ ಆದೇಶಿಸಿದೆ.
ಥಾರ್ಪಕರ್ ಜಿಲ್ಲೆಯ ನಿವಾಸಿಯಾದ ಬೀಲ್ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಸಮೀಪದ ಗ್ರಾಮೀಣ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ತೆರಳಿದ್ದಾರೆ. ಅಲ್ಲಿ ತಜ್ಞ ಹೆರಿಗೆ ವೈದ್ಯ ಇರಲಿಲ್ಲ. ಅಲ್ಲದೇ ಅಲ್ಲಿನ ಸಿಬ್ಬಂದಿಗೆ ಹೆರಿಗೆ ಮಾಡಿಸುವ ಅನುಭವ ಕೂಡ ಇರಲಿಲ್ಲ.
ಆಸ್ಪತ್ರೆಯ ವೈದ್ಯನೊಬ್ಬ ಹೆರಿಗೆ ಮಾಡಿಸುವ ಪ್ರಯತ್ನದಲ್ಲಿ ಮಗುವಿನ ತಲೆ ಕತ್ತರಿಸಿದ್ದು, ಅದನ್ನು ಅಲ್ಲಿಯೇ ಬಿಟ್ಟು ಹೊಲಿಗೆ ಹಾಕಿ ಕಳುಹಿಸಿದ್ದಾನೆ. ಇದರಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯನ್ನು ಹೊತ್ತು ಹಲವು ಆಸ್ಪತ್ರೆಗಳಿಗೆ ಅಲೆದಾಡಿದ್ದು, ಕೊನೆಯ ಒಂದು ಆಸ್ಪತ್ರೆಯವರು ಹೊಟ್ಟೆಯೊಳಗೆ ಇದ್ದ ಮೃತ ಮಗುವಿನ ಶವ ಹೊರಗೆ ತೆಗೆದು ಮಹಿಳೆಯನ್ನು ರಕ್ಷಿಸಿದ್ದಾರೆ.
ಆಸ್ಪತ್ರೆಗೆ ತೆರಳಿದಾಗ ಮಗುವಿನ ತಲೆ ಮಹಿಳೆಯ ಮೂತ್ರಪಿಂಡದ ಸಮೀಪ ಹೋಗಿತ್ತು. ಕೂಡಲೇ ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯರು ಮಹಿಳೆಯ ಪ್ರಾಣ ಉಳಿಸಿದರು.