ಬೆಂಗಳೂರು: ಆನ್ ಲೈನ್ ಗೇಮ್ ಮೂಲಕ ಜೂಜಾಟ ಪ್ರೇರೇಪಿಸುವುದರ ಬಗ್ಗೆ ಸಾಕಷ್ಟು ಆಕ್ಷೇಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಇಂತಹ ಜೂಜಾಟಗಳನ್ನು ನಿಷೇಧಿಸುವುದಕ್ಕೆ ಕಾನೂನಾತ್ಮಕ ಕ್ರಮ ಜಾರಿಗೆ ತರುವ ಬಗ್ಗೆ ಸುಳಿವು ನೀಡಿದ್ದಾರೆ.
ಇಂದಿನ ಯುವಕರು ಆನ್ ಲೈನ್ ಜೂನು ಗೇಮ್ ಗಳ ಅಮಿಷಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಅವರು ಮಾತ್ರವಲ್ಲ, ಅವರ ಕುಟುಂಬಸ್ಥರೂ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳ ಜತೆ ಆನ್ ಲೈನ್ ಗೇಮ್ ಗಳ ನಿಷೇಧದ ಕುರಿತಂತೆ ಸಭೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಜತೆ ಇದರ ಬಗ್ಗೆ ಚರ್ಚೆ ಮಾಡಲಿದ್ದೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಇತರ ರಾಜ್ಯಗಳಲ್ಲಿ ಇಂತಹ ಆಟಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿರುವ ಅವರು ನಮ್ಮ ರಾಜ್ಯದಲ್ಲೂ ಇಂತಹ ಕಾನೂನು ಜಾರಿಗೆ ತರಲು ಕ್ರಮ ಕೈಗೊಳ್ಳುವ ಚಿಂತನೆ ನಡೆಸಿದ್ದಾರೆ.