ಗೃಹ ಸಚಿವ ಜಿ.ಪರಮೇಶ್ವರ್ ಮಾರ್ಚ್ 6 ರಿಂದ 13 ರವರೆಗೆ ಲಂಡನ್ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಪೊಲೀಸರ ಸುರಕ್ಷತೆಗೆ ಸಂಬಂಧಿಸಿದಂತೆ ನಿಗದಿಯಾಗಿರುವ ಇಂಟರ್ನ್ಯಾಷನಲ್ ಪೊಲೀಸ್ ಸೆಮಿನಾರ್ನಲ್ಲಿ ಪಾಲ್ಗೊಳ್ಳಲು ಗೃಹ ಸಚಿವ ಜಿ.ಪರಮೇಶ್ವರ್ ತೆರಳುತ್ತಿದ್ದಾರೆ. ಸಚಿವರೊಂದಿಗೆ ಅವರ ಸಲಹೆಗಾರ ಕೆಂಪಯ್ಯ ಕೂಡಾ ಸಾಥ್ ನೀಡಲಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸೇರಿದಂತೆ ಉನ್ನತ ಅಧಿಕಾರಿಗಳ ತಂಡದೊಂದಿಗೆ ಲಂಡನ್ಗೆ ಪ್ರಯಾಣಿಸಲಿದ್ದಾರೆ.
ರಾಜ್ಯ ಬರಗಾಲದಿಂದ ತತ್ತರಿಸಿರುವಾಗ ಗೃಹ ಸಚಿವ ಪರಮೇಶ್ವರ್ ಆಂಡ್ ಟೀಂ ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದು ವಿಪಕ್ಷಗಳಿಗೆ ಮತ್ತೊಂದು ಬ್ರಹ್ಮಾಸ್ತ್ರ ದೊರೆತಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.