Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ಲಾಸ್ಟಿಕ್ ಕವರ್ ಕೈಯಲ್ಲಿದರೆ ಫೈನ್...!!!

ಪ್ಲಾಸ್ಟಿಕ್ ಕವರ್ ಕೈಯಲ್ಲಿದರೆ ಫೈನ್...!!!
ಬೆಂಗಳೂರು , ಗುರುವಾರ, 14 ಜುಲೈ 2022 (16:37 IST)
ಜುಲೈ 1 ಸಿಂಗಲ್​ ಯ್ಯೂಸ್​​ ಪ್ಲಾಸ್ಟಿಕ್​ (Single Use Plastic Ban) ಅನ್ನು ಸಂಪೂರ್ಣವಾಗಿ ಬ್ಯಾನ್​ ಮಾಡಲಾಗಿದೆ. ತರಕಾರಿ-ಹಣ್ಣು, ಮಾಂಸ ತರುತ್ತಿದ್ದ ಪ್ಲಾಸ್ಟಿಕ್​ ಕವರ್​​ ಗಳು (Plastic Cover) ಇನ್ಮುಂದೆ ಕಣ್ಣಿಗೆ ಬಿದ್ದರೆ, ಬಿಬಿಎಂಪಿ (BBMP) ದಂಡ ಹಾಕಲಿದೆ.
ಸಾಮಾನ್ಯ ಜನ ರಸ್ತೆಯಲ್ಲಿ ಪ್ಲಾಸ್ಟಿಕ್​ ಕವರ್ ಹಿಡಿದುಕೊಂಡು ಹೋಗುತ್ತಿದ್ದರೂ ತಡೆದು ನಿಲ್ಲಿಸಿ ಪಾಲಿಕೆಯವರು ಪ್ರಶ್ನಿಸುತ್ತಿದ್ದಾರೆ. ಇನ್ನು ಅಂಗಡಿಗಳಿಗೆ ಭೇಟಿ ಕೊಟ್ಟು ಪ್ಲಾಸ್ಟಿಕ್​ ಕಲರ್​ ಬಂಡಲ್​ ಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಜುಲೈ 1 ರಿಂದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ಎಂಟು ವಲಯಗಳಲ್ಲಿ 1,926.8 ಕೆಜಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ 1,319 ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದೆ. ಇದೇ ಅವಧಿಯಲ್ಲಿ 8,36,300 ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ನಾಗರಿಕ ಸಂಸ್ಥೆ ಬಿಡುಗಡೆ ಮಾಡಿದ ಅಂಕಿಅಂಶದಿಂದ ತಿಳಿದು ಬಂದಿದೆ.
 
25,000 ರೂಪಾಯಿ ದಂಡ
 
ಈ ಕುರಿತು ಹೇಳಿಕೆ ನೀಡಿರುವ ಬಿಬಿಎಂಪಿ, ನಾಯಂಡಹಳ್ಳಿಯಲ್ಲಿರುವ ಯುನಿಕ್ ಪ್ಲಾಸ್ಟ್ ತಯಾರಿಕಾ ಘಟಕವು 15 ದಿನಗಳ ಹಿಂದೆ ನಿಷೇಧಿತ ಪ್ಲಾಸ್ಟಿಕ್ ತಯಾರಿಸಿ ಸಿಕ್ಕಿಬಿದ್ದಿದೆ. ಆದರೆ ಜುಲೈ 13ರಂದು ಪರಿಶೀಲಿಸಿದಾಗ ಅವರು ನಿಷೇಧಿತ ಪ್ಲಾಸ್ಟಿಕ್ ಅನ್ನು ಇನ್ನೂ ತಯಾರಿಸುತ್ತಿದ್ದರು, ಆದ್ದರಿಂದ ಮಾರ್ಷಲ್‌ಗಳು ಅವರಿಗೆ 25,000 ರೂಪಾಯಿ ದಂಡ ವಿಧಿಸಿ 85 ಕೆಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆನಡಾದಲ್ಲಿನ ಸಂಸದ ಕನ್ನಡಿಗ ಚಂದ್ರ ಆರ್ಯ ಬೆಂಗಳೂರಿಗೆ ಭೇಟಿ