ಬೆಂಗಳೂರು : ಉದ್ಯಾನನಗರಿ ಬೆಂಗಳೂರಿನಲ್ಲಿಂದು ಗ್ರಾಮೀಣ ಸೊಗಡು ಮನೆ ಮಾಡಿತು. ಸಂಡೇ ಸ್ಪೆಷಲ್ ಎಂಬಂತೆ ಜನ ಬಸವನಗುಡಿ ಕಡಲೆಕಾಯಿ ಪರಿಷೆಯತ್ತ ಮುಖ ಮಾಡಿದ್ರು.
ಬಸವನಗುಡಿ ಬುಲ್ ಟೆಂಪಲ್ ರಸ್ತೆಯಲ್ಲಿಂದು ಬಡವರ ಬಾದಾಮಿಯ ರಂಗು ಪಸರಿಸಿತು. ಎಲ್ಲೆಡೆ ಕಡಲೆಕಾಯಿ ರಾಶಿ, ರಾಶಿ ಗ್ರಾಹಕರ ಕೈ ಬೀಸಿ ಕರೆಯುತ್ತಿತ್ತು. ಇಂದಿನಿಂದ ನಗರದ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಕಡಲೆ ಕಾಯಿ ಪರಿಷೆಗೆ ಚಾಲನೆ ನೀಡಿದ್ದಾರೆ.
ಕಡಲೆಕಾಯಿ ಜಾತ್ರೆಗೆ 500 ವರ್ಷಗಳ ಇತಿಹಾಸವಿದ್ದು, ಪಕ್ಕದ ತಮಿಳುನಾಡಿನಿಂದಲೂ ಕಡಲೆ ಕಾಯಿ ವ್ಯಾಪಾರಿಗಳು ಆಗಮಿಸಿದ್ರು. ಈ ಬಾರಿ ಪರಿಷೆಯಲ್ಲಿ ಕಡಲೆ ಕಾಯಿ ಬಾರಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ.
ಒಂದು ಸೇರು ಹಸಿ ಕಡಲೆಕಾಯಿ 50 ರೂ. ಹಾಗೇ ಹುರಿದ ಕಡಲೆಕಾಯಿ ಸೇರಿಗೆ 80 ರೂಪಾಯಿನಂತೆ ಮಾರಾಟವಾಗುತ್ತಿದೆ. 2 ಸಾವಿರ ವ್ಯಾಪಾರಿಗಳು ಪರಿಷೆಯಲ್ಲಿದ್ದಾರೆ.
ಪರಿಷೆ ಮುಗಿಯೋವರೆಗೂ ಬುಲ್ ಟೆಂಪಲ್ ದೇಗುಲದ ಮುಂಭಾಗ ವಾಹನ ಓಡಾಟ ನಿಷೇಧಿಸಲಾಗಿದೆ.