Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಕ್ರಮ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು

ಅಕ್ರಮ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು
ಮಂಡ್ಯ , ಮಂಗಳವಾರ, 20 ಡಿಸೆಂಬರ್ 2022 (13:03 IST)
ಮಂಡ್ಯ : ಸಾಕಷ್ಟು ವಿವಾದ ಸೃಷ್ಟಿಸಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಇದೀಗ ಮತ್ತೆ ಭುಗಿಲೆದ್ದಿದೆ.

ಜಾಮಿಯಾ ಮಸೀದಿಯ ಒಳಭಾಗದಲ್ಲಿ ನಡೆಯುತ್ತಿರುವ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ ಮಂಡ್ಯ ಜಿಲ್ಲಾಡಳಿತಕ್ಕೆ ಗಡುವು ನೀಡಿದೆ.

ಐತಿಹಾಸಿಕ ಸ್ಥಳವಾಗಿರುವ ಜಾಮಿಯಾ ಮಸೀದಿ ಅಲ್ಲ, ಅದು ಮಂದಿರ ಎಂದು ಅತ್ತ ಬಜರಂಗಸೇನೆ ಹೈಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನು ಹೋರಾಟವನ್ನು ಆರಂಭಿಸಿದೆ.

ಇತ್ತ ಹಿಂದೂ ಜಾಗರಣ ವೇದಿಕೆ ಮಸೀದಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದರಸಾ ತೆರವಿಗೆ ಹೋರಾಟವನ್ನು ಆರಂಭಿಸಿದೆ. 1934 ರಲ್ಲಿ ಜಾಮಿಯಾ ಮಸೀದಿ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಸೇರಿದ್ದು, ಈ ಕಟ್ಟಡದಲ್ಲಿ ಮದರಸಾದಂತಹ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ.

ಇಷ್ಟಾದರೂ ಕೂಡಾ ಕ್ರಮ ಕೈಗೊಳ್ಳದ ಹಿನ್ನೆಲೆ ಹಿಂದೂ ಜಾಗರಣಾ ವೇದಿಕೆ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಗಡುವು ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಝಿಕಾ ವೈರಸ್ ಭೀತಿ!