Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆದ್ದಾರಿ ಜಲಾವೃತ ; ಬೆಂಗಳೂರು – ಪುಣೆ ರೋಡ್ ಬಂದ್

ಹೆದ್ದಾರಿ ಜಲಾವೃತ ; ಬೆಂಗಳೂರು – ಪುಣೆ ರೋಡ್ ಬಂದ್
ಚಿಕ್ಕೋಡಿ , ಮಂಗಳವಾರ, 6 ಆಗಸ್ಟ್ 2019 (14:45 IST)
ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ.

ಪಂಚಗಂಗಾ ನದಿ ನೀರಿನಿಂದ ರಾಷ್ಟ್ರೀಯ ಹೆದ್ದಾರಿ 4 ಜಲಾವೃತಗೊಂಡಿದೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಹತ್ತಿರದಲ್ಲಿ ನಿಪ್ಪಾಣಿಯ ಯಮಗರ್ಣಿ ಬಳಿ ಹೆದ್ದಾರಿಗೆ ನೀರು ತುಂಬಿಕೊಂಡಿದೆ. ನೀರಿನಿಂದ ಹೆದ್ದಾರಿ ಆವೃತವಾಗಿದೆ.

ಹೀಗಾಗಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.

ನಿತ್ಯ ಲಕ್ಷಾಂತರ ವಾಹನಗಳು ಓಡಾಡುವ ಮುಖ್ಯ ಹೆದ್ದಾರಿ ಇದಾಗಿದೆ. ಅಂತರರಾಜ್ಯ ಸರಕು ಸಾಗಣೆಯ  ಪ್ರಮುಖ ರಾಷ್ಟ್ರೀಯ ಹೆದ್ದಾರಿ 4 ಇದಾಗಿದ್ದು, ವಾಹನಗಳ ಸಂಚಾರ ಬಂದ್ ಆಗಿರೋದ್ರಿಂದ ಅಪಾರ ನಷ್ಟ ಸಂಭವಿಸುವ ಲಕ್ಷಣಗಳು ಕಂಡು ಬಂದಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ಮಳೆ : ಮಂಗಳೂರಲ್ಲಿ ಎರಡು ದಿನ ರೆಡ್ ಅಲರ್ಟ್